ಅವಹೇಳನಕಾರಿ ಪೋಸ್ಟ್ಃ MLA ಮನೆಗೆ ಬೆಂಕಿ, ಪೊಲೀಸರ ಮೇಲೆ ಹಲ್ಲೆ, ದಾಂದಲೆ
MLA ಮನೆಗೆ ಬೆಂಕಿ.! ಯಾಕಿಟ್ಟರೀ ಬೆಂಕಿ.. ಯಾರಿಟ್ಟಿರೀ ಬೆಂಕಿ..?
ಬೆಂಗಳೂರಃ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿನೊಬ್ಬ ಫೇಸ್ ಬುಕ್ ನಲ್ಲಿ ಮಹ್ಮದ್ ಪೈಗಂಬರ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಿದ್ದಾನೆಂದು ಆಕ್ರೋಶಗೊಂಡ ಕಾವಲ್ ಬೈರಸಂದ್ರ ಕ್ಷೇತ್ರದ ಒಂದು ಸಮುದಾಯದ ಯುವಕರು ರೊಚ್ಚಿಗೆದ್ದು ಪುಂಡಾಟಿಕೆ ನಡೆಸಿದ್ದಾರೆ.
ಇದೇ ವೇಳೆ ಶಾಸಕರ ಮನೆಗೂ ಬೆಂಕಿ ಇಟ್ಟಿದ್ದು, ರಸ್ತೆಯಲ್ಲಿ ಸಿಕ್ಕಸಿಕ್ಕವರನ್ನು ಬಡಿಯುತ್ತಿದ್ದು, ಮನೆ ಮನೆಗೆ ನುಗ್ಗಿ ಬಡಿಯುವದು, ಬೆಂಕಿ ಇಡುವ ಕೃತ್ಯ ಎಸಗುತ್ತಿದ್ದು, ಸ್ಥಳದಲ್ಲಿದ್ದ ಪೊಲೀಸರು ಮತ್ತು ಮಾಧ್ಯಮದವರ ಮೇಲೂ ಹಲ್ಲೆ ನಡೆಸಿದ್ದಾರೆ.
ಅಲ್ಲದೆ ಪೊಲೀಸ್ ಠಾಣೆಗೂ ನುಗ್ಗಿದ್ದು ದಾಂಧಲೆ ಮಾಡಿದ್ದಾರೆ.
ಕಂಡಕಂಡಲ್ಲಿ ಪುಂಡಾಟಿಕೆ ನಡೆಸಿದ್ದು, ಮನೆ ಮನೆಗೆ ನುಗ್ಗಿ ಜನರನ್ನು ಹೊಡೆದು ಬೆದರಿಕೆವೊಡ್ಡುತ್ತಿದ್ದಾರೆ ಎನ್ನಲಾಗಿದೆ.
ಹಲವು ವಾಹನಗಳಿಗೂ ಬೆಂಕಿ ಇಟ್ಟು ಎದುರಿಗೆ ಸಿಕ್ಕವರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಮೇಲೂ ಹಲ್ಲೆ ನಡೆಸಿದ್ದು, ಅಲ್ಲದೆ ಶಾಸಕರ ಮನೆ ಸೇರಿದಂತೆ ಸಂಬಂಧಿಕರ ಮೆನೆಗೂ ಬೆಂಕಿ ಹಚ್ಚಿದ್ದು, ರಸ್ತೆಯಲ್ಲಿ ಸಿಕ್ಕ ವಾಹನಗಳ ಗಾಜು ಪುಡಿ ಪುಡಿ ಮಾಡಲಾಗಿದೆ. ಅಲ್ಲದೆ ಪೊಲೀಸರ ಮೇಲೆಯೂ ಹಲ್ಲೆ ನಡೆದಿದೆ.
ಇನ್ನೂರಕ್ಕೂ ಹೆಚ್ವು ಜನರಿಂದ ಯುವಕರ ದಂಡಿನಿಂದ ಈ ಕೃತ್ಯ ನಡೆಯುತ್ತಿದೆ ಎನ್ನಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸ್ ಪಡೆ ನಿಯಂತ್ರಣಕ್ಕಾಗಿ ಸಾಕಷ್ಟು ಪ್ರಯತ್ನ ಪಡುತ್ತಿದ್ದು, ಅಶ್ರುವಾಯು ಸಿಡಿಸುತ್ತಿದ್ದರು ಪರಿಸ್ಥಿತಿ ನಿಯಂತ್ರಣ ಕ್ಕೆ ಬರುತ್ತಿಲ್ಲ.
ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸುತ್ತಿದ್ದು, ನಿಯಂತ್ರಣಕ್ಕೆ ಇನ್ನು ಹೆಚ್ಚಿನ ಪೊಲೀಸರನ್ನ ಘಟನಾ ಸ್ಥಳಕ್ಕೆ ಕಳುಹಿಸಲಾಗಿದ್ದು, ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಕ್ಷೇತ್ರದಲ್ಲಿ ಉದ್ವಗ್ನಗೊಂಡ ಜನ ಶಾಂತತೆಗೆ ಕಿವಿಗೊಡದೆ ಗಲಾಟೆ ಮುಂದುವರೆಸಿದ್ದಾರೆ.