ರೈತ ಓ ರೈತ ಅವಧೂತ ನೀ ಅನ್ನದಾತ… ಸಾಲದ ಈ ಭೂತ… ಹಾಡು ಕೇಳಿದಿರಾ?
ಕೊಪ್ಪಳದಲ್ಲಿ ಶಿಕ್ಷಣ ಇಲಾಖೆಯಲ್ಲಿ ಸಿಆರ್ ಪಿ ಆಗಿರುವ ಹನುಮಂತಪ್ಪ ಕುರಿ ಅವರು ಅದ್ಭುತವಾದ ರೈತ ಗೀತೆಯ ರಚಿಸಿ ಹಾಡುವ ಮೂಲಕ ನೇಗಿಲಯೋಗಿಗೆ ಗೀತನನಮನ ಸಲ್ಲಿಸಿರುವ ವಿಡಿಯೋ ವೈರಲ್ ಆಗಿದ್ದು ಜನಮೆಚ್ಚುಗೆಗೆ ಪಾತ್ರವಾಗಿದೆ. ಹನುಮಂತ್ಪ ಕುರಿ ರಚಿಸಿದ ಗೀತೆ ಇಲ್ಲಿದೆ…
ರೈತ ಓ ರೈತ ಅವಧೂತ ನೀ ಅನ್ನದಾತ
ಸಾಲದ ಈ ಭೂತ ಬಲಿ ಪಡಿಯಿತೋ ನಿನ್ನನೂ ಈ ಪ್ರೇತ
ನಿನ್ನ ಬೆವರು ಈ ಜಗದ ಉಸಿರು
ನೀ ಬಗ್ಗದಿದ್ದರೆ ಬಿಕ್ಕುವುದು ಈ ಜಗವು
ಜಗ ಕಾಯುವ ಜಗಧೀಶನೆ ನೀ ನಮ್ಮಯ ದೊರೆ
ಸಾಲ ಸೋಲ ಮಾಡಿದೆ ನೀನು
ಜಗವನೆಲ್ಲಾ ಸಲುಹಿದೆ ನೀನು
ಮಳೆ ಬೆಳೆ ಇಲ್ಲದೆ ಬಳಲಿದೆ ನೀನು
ಮರವನು ಕಾಡುವ ವಿಧಿಯೂ ನರನನೂ ಕಾಡದೆ ಬಿಡದೆ
ವಿಧಿಯಾಟಕೆ ನೀನು ಬಲಿಯಾದೆ
ಸಾಲದ ನೇಣಿಗೆ ಶರಣಾದೆ
ಬಾರದ ಲೋಕಕೆ ನೀನೋದೆ
ಅನ್ನವ ಹಾಕಿದ ಪುಣ್ಯಾತ್ಮ
ಕಣ್ಣಿಗೆ ಕಾಣುವ ಪರಮಾತ್ಮ
ಜಗ ಕಾಯುವ ಜಗಧೀಶನೆ
ಈ ಮಣ್ಣಿನ ಮಗ ಮಣ್ಣಿನ ಮಗ
ಉಳುವ ನಿನ್ನ ತಾಕತ್ತು ಬೆಳೆವ ಜಗದ ಸಂಪತ್ತು
ನೀನಿಲ್ಲದಿದ್ದರೆ ಅನ್ನಕೆ ಆಪತ್ತು ಕಷ್ಟನಷ್ಟ ಏನೇ ಬರಲಿ
ಗುರುವಿನ ದಯೆ ಒಂದಿರಲಿ
ತಾಳಿದವನು ಬಾಳಿದನೆಂಬ ಸುತ್ರ ನಿನ್ನದಾಗಲಿ
ಕಣ್ತರೆದು ನೋಡಲಿ ಸರಕಾರ
ನೀಡಲಿ ಇವರಿಗೆ ಪರಿಹಾರ
ಕೈಮುಗಿದು ಬೇಡುವೆ ನಿನಗೊಮ್ಮೆ
ಕಣ್ಣೀರು ತರದಿರು ಮತ್ತೊಮ್ಮೆ
ಜಗ ಕಾಯುವ ಜಗಧೀಶನೆ ಈ ಮಣ್ಣಿನ ಮಗ
ರೈತ ಓ ರೈತ ಅವಧೂತ ನೀ ಅನ್ನದಾತ
ಸಾಲದ ಈ ಭೂತ ಬಲಿಪಡಿಯಿತೊ ನಿನ್ನನ್ನು ಈ ಪ್ರೇತ
ಸರದಾರನೆ ಸುಖದಾರನೆ ನೀ ಮಣ್ಣಿನ ಮಗ ಮಣ್ಣಿನ ಮಗ
ರಚನೆ –ಹನುಮಂತಪ್ಪ ಕುರಿ, ಸಿಆರ್ ಪಿ, ಶಿಕ್ಷಣ ಇಲಾಖೆ. ಬೋಚನಹಳ್ಳಿ
ಸಂಪರ್ಕ : 98807599712