ಪ್ರಮುಖ ಸುದ್ದಿ
ಶಹಾಪುರ-ಸುರಪುರನಲ್ಲಿ ಬಿಜೆಪಿ ಸಂಭ್ರಮ
ಶಹಾಪುರ- ಸುರಪುರನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಯಾದಗಿರಿಃ ವಿಶ್ವಾಸ ಮತಯಾಚನೆಯಲ್ಲಿ ಮೈತ್ರಿ ಸರ್ಕಾರ ಸೋತಿದ್ದು, ಬಿಜೆಪಿಗೆ ಗೆಲುವು ದೊರೆತ ಪರಿಣಾಮ ಜಿಲ್ಲೆಯ ಶಹಾಪುರ- ಸುರಪುರ ನಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.
ಶಹಾಪುರದಲ್ಲಿ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಮುಖಂಡರಾದ ನಗರ ಸಭೆ ಸದಸ್ಯರು, ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸುರಪುರದಲ್ಲಿ ಶಾಸಕ ರಾಜುಗೌಡರಮನೆ ಮುಂದೆ ಸೇರಿದ್ದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.