ಕಾವ್ಯ
ಸೋಮಾರಿ ಸಿದ್ಧ ಮದ್ಯಾಹ್ನ ಎದ್ದ..ಬಸವರಾಜ ಕಾಸೆ ಬರೆದ ಕನಸಿನ ಕವಿತೆ
ಹೇಳದೆ ಕೇಳದೆ ಹತ್ತಿರ ಬಾರೇ..
ಎದ್ದು ಬಿದ್ದು ಎದ್ದೆ ನಾ ಇಂದು ಮಧ್ಯಾಹ್ನ
ಆಹಾ ಎಂತಹ ಸೊಗಸಾದ ನಿದ್ದೆ
ಮಾಡಬೇಕಿತ್ತು ಇನ್ನೂ ಸ್ವಲ್ಪ
ಓ ಕೇಳೆ ನನ್ನ ಹೊರ ಹೋದ ಆಕಳಿಕೆ
ತೇಲಿ ಬಂದಿತ್ತು ಏನು ಚೆಂದ ಕನಸು
ನನ್ನ ಬೆರಳಲ್ಲೆ ಆಡುತ್ತಾ ಉಯ್ಯಾಲೆ
ಮುತ್ತಿಟ್ಟು ಮುದ್ದಿಸುತ್ತಿದಳು ಬೆಳದಿಂಗಳು
ಕಾರಣ ಹೇಳೇ ನನ್ನ ಎಬ್ಬಿಸಿದ ಹಗಲೇ
ಮೋಹಿನಿ ಕಾಟ ಇರಬೇಕಿತ್ತು ಒಂಚೂರು
ಹರೆಯದ ಮನಸ್ಸಿಗೆ ಇನ್ನೆಂತಹ ಬಯಕೆ
ದಿನನಿತ್ಯದ ರಗಳೆ ಇದ್ದಿದ್ದೆ ಎಂದು
ಹೇಳದೆ ಕೇಳದೆ ಹತ್ತಿರ ಬಾರೇ ತೂಕಡಿಕೆ
ಆಹಾ ಮೈ ಮುರಿಯಲು ಅದೆಂತಹ ಸುಖ
ಮಲಗಿದ ಆಯಾಸ ಹೋಯಿತಲ್ಲೆ ಮೆಲ್ಲಗೆ
ಈಗ ಮಾಡಬೇಕು ಏನೋ ಕೆಲಸ
ಏಳಿಬೇಡವೇ ನನ್ನ ಮಮಕಾರದ ಬೆಡ್ಡೆ
ಅವನಾರು ಬುದ್ಧ, ನಾ ಸೋಮಾರಿ ಸಿದ್ಧ
ಹೇಳಬೇಕೇ ಇನ್ನೂ ನನ್ನ ಬಗ್ಗೆ
ಹೊಟ್ಟೆಯು ತಾಳ ಹಾಕುವುದಾ ಬಿಡುತ್ತಿಲ್ಲ
ಧನ್ಯವಾದ ನಿನಗೆ ಎಬ್ಬಿಸಿದ ಗಡಿಯಾರವೇ
–ಬಸವರಾಜ ಕಾಸೆ
ಹ್ಹ ಹ್ಹ,,,, ಹ್ಹಹಾ ಎದ್ದು ಬಿದ್ದು ನಗೂವಂತೆ ಮಾಡಿದಿರಿ ….