ಆಕಾಶದಿಂದ ಬಿದ್ದ ಉಲ್ಕಾ ಶಿಲೆ ಸಂಗ್ರಹಿಸಿದ ಜನರಿಗೆ ದುಡ್ಡೋ ದುಡ್ಡೋ.!
ಆಕಾಶದಿಂದ ಬಿದ್ದ ಉಲ್ಕಾ ಶಿಲೆ ಸಂಗ್ರಹಿಸಿದ ಜನರಿಗೆ ದುಡ್ಡೋ ದುಡ್ಡೋ.!
ದುಡ್ಡಿನ ಭಾಗ್ಯ ತಂದುಕೊಟ್ಟ ಉಲ್ಕಾ ಶಿಲೆ
ವಿವಿ ಡೆಸ್ಕ್ಃ ಜನ ಬೆರಗಾಗುವಂತ ಬಂಡೆಗಲ್ಲುಗಳು ಆಕಾಶದಿಂದ ಉದುರಿವೆ.ಇದನ್ನು ಕಂಡ ಜನ ನಿಬಬೆರಗಾಗಿದ್ದು, ಅವುಗಳನ್ನು ಸಂಗ್ರಹಿಸಿಟ್ಟ ಘಟನೆ ಬ್ರೆಜಿಲ್ ನ ಸಾಂತಾ ಫಿಲೋಮಿನಾದಲ್ಲಿ ನಡೆದಿದೆ.
ಇಲ್ಲಿನ ನಿವಾಸಿಗಳೇ ಮಳೆ ರೂಪದಲ್ಲಿ ಬಿದ್ದ ಈ ಅಪರೂಪವಾಗಿ ಕಂಡ ಬಂಡೆಗಲ್ಲನ್ನು ಸಂಗ್ರಹಿಸಿದ್ದಾರೆ. ನೂರಾರು ಉಲ್ಕಾ ಶಿಲೆ ಬಂಡೆಗಳು ಆಕಾಶದಿಂದ ಮಳೆಯ ರೂಪದಲ್ಲಿ ಬಿದ್ದಿವೆ.
ವರದಿಗಳ ಪ್ರಕಾರ, ಬಾಹ್ಯಾಕಾಶ ಶಿಲೆಯ ತುಣುಕುಗಳು 4.6 ಶತಕೋಟಿ ವರ್ಷಗಳಷ್ಟು ಹಳೆಯದಾದ ಉಲ್ಕಾ ಶಿಲೆಯ ಭಾಗವೆಂದು ನಂಬಲಾಗಿದೆ.
ಇನ್ನೂ ಸಾಂತಾ ಫಿಲೋಮಿನಾದ ನಿವಾಸಿಗರು ಈ ಶಿಲೆಯನ್ನು ಸಂಗ್ರಹಿಸಿಕೊಂಡವು ಶ್ರೀಮಂತರಾಗುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. 40 ಕೆಜಿ ತೂಕದ ಉಲ್ಕಾ ಶಿಲೆಯೊಂದು 26,000 ಡಾಲರ್ ಮೌಲ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ಶಿಲೆ ವಿದೇಶದಲ್ಲಿ ಸಿಕ್ಕಾಪಟ್ಟೆ ಬೆಲೆ ಇದೆ ಎನ್ನಲಾಗಿದೆ.
ಹೀಗಾಗಿ ಈ ಶಿಲೆ ಸಂಗ್ರಹಿಸಿಟ್ಟಿದ್ದ ಹಲವರಿಂದ ಸ್ಥಳೀಯರು ಖರೀದಿಸಿ ಅದನ್ನು ವಿದೇಶಕ್ಕೆ ಅಪಾರ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಆಕಾಶದಿಂದ ಬಿದ್ದ ಬಂಡೆಗಲ್ಲು ಇದೀಗ ಸಂಗ್ರಹಿಸಿದ ಜನರ ಮನೆ ಖಜಾನೆ ತುಂಬುತ್ತಿದೆ ಅಂದ್ರೆ ತಪ್ಪಿಲ್ಲ ಬಿಡಿ.