ವಸ್ತುವಿನ ಸೇವೆ ಅಲಭ್ಯವಾದರೆ ಗ್ರಾಹಕರ ವೇದಿಕೆಗೆ ದೂರು ನೀಡಿ
ಕೃಷಿ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ
ಯಾದಗಿರಿಃ ದುಡ್ಡು ಕೊಟ್ಟು ಖರೀದಿಸಿದ ಯಾವುದೇ ವಸ್ತು ಸಮರ್ಪಕ ಸೇವೆಗೆ ಬಳಕೆಯಾಗುತ್ತಿಲ್ಲ. ಅಥವಾ ಸೇವೆ ಅಲಭ್ಯ ಎನಿಸಿದ್ದಲ್ಲಿ ಆ ಕುರಿತು ಗ್ರಾಹಕರ ವೇದಿಕೆ ದೂರು ಸಲ್ಲಿಸಿ ನ್ಯಾಯ ಪಡೆಯಬಹುದು ಎಂದು ಧಾರವಾಡ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಸಂಚಾಲಕ, ನ್ಯಾಯವಾದಿ ಬಸವಪ್ರಭು ಹೊಸಕೇರಿ ತಿಳಿಸಿದರು.
ಜಿಲ್ಲೆಯ ಶಹಾಪುರ ನಗರ ಸಮೀಪದ ಭೀಮರಾಯನ ಗುಡಿ ಕೃಷಿ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕರ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ‘ಬೆಳೆಯುತ್ತಿರವ ಡಿಜಿಟಲ್ ಮಾರುಕಟ್ಟೆ ಗ್ರಾಹಕರ ರಕ್ಷಣೆಯಲ್ಲಿ ಸಮಸ್ಯೆಗಳು ಮತ್ತ ಸವಾಲುಗಳು’ ಕುರಿತು ಉಪನ್ಯಾಸ ನೀಡಿದರು.
ಯಾವುದೇ ವಸ್ತು ನೀವು ಉದ್ದೇಶವಿಟ್ಟು ಖರೀದಿಸಿದಂತೆ ಬಳಕೆಗೆ ಬರುತ್ತಿಲ್ಲ ಎಂದಾದರೆ ಅಥವಾ ಮೋಸವಿದೆ ಎಂದು ತಿಳಿದು ಬಂದಲ್ಲಿ ಕೂಡಲೇ ಗ್ರಾಹಕರ ರಕ್ಷಣೆ ಕಾಯ್ದೆ ಅನ್ವಯ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಬೇಕು. ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸುವ ಮೂಲಕವು ನ್ಯಾಯ ಪಡೆಯಬಹುದು.
ಇಲಿ ಮುಖ್ಯವಾಗಿ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಲು ವಕೀಲರು ಬೇಕೆ ಬೇಕು ಎಂಬುದಿಲ್ಲ. ಖುದ್ದಾಗಿ ದೂರು ಸಲ್ಲಿಸಬಹುದು ಎಂದರು.
ಶಿವನೊಗ್ಗದ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಚಾಲಕ ಎಂ.ಎಂ.ಜಯಸ್ವಾಮಿ ಮಾತನಾಡಿ, ಜಾಹಿರಾತು ನೋಡಿ ಸಾಕಷ್ಟು ಜನರು ಮೋಸ ಹೋಗುತ್ತಾರೆ. ಕಾರಣ ಗ್ರಾಹಕರು ಜಾಹಿರಾತಿ ಅನ್ವಯ ನೀವು ಖರೀದಿಸಿದ ವಸ್ತು ಬಳಕೆಯಾಗುತ್ತಿಲ್ಲ ಮೋಸವಾಗಿದೆ ಎಂಬುದು ಅರಿತಿದ್ದಲ್ಲಿ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬಹದು.
ಅಲ್ಲದೆ ಯಾವುದೆ ವಸ್ತು ಖರೀದಿ ವೇಳೆ ಆಯ ವಸ್ತುವಿನ ಮೇಲೆ ನಮೂದಿಸಿದ ಬೆಲೆಯೇ ನೀಡಬೇಕು. ಅದಕ್ಕಿಂತ ಹೆಚ್ಚು ನೀಡುವ ಅಗತ್ಯವಿಲ್ಲ. ಬಹುತೇಕ ಜನರು ಮೋಸ ಹೋದರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗುವುದಿಲ್ಲ. ಹೀಗಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಗ್ರಾಹಕರ ರಕ್ಷಣೆ ಕಾಯ್ದೆ ಬಗ್ಗೆ ಸಮರ್ಪಕ ತಿಳುವಳಿಕೆ ಹೊಂದಿರದ ಕಾರಣ ಈ ಕಾಯ್ದೆಯಡಿ ಪ್ರಕರಣಗಳು ಸಲ್ಲಿಕೆಯಾಗುತ್ತಿಲ್ಲ. ಕಾರಣ ಗ್ರಾಹಕರಿಗೆ ಕಾಯ್ದೆ ಕುರಿತು ಶಿಕ್ಷಣ ಪಡೆಯುವ ಅಗತ್ಯವಿದೆ ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯೆ ನಂದಾ ಈಶ್ವರಚಂದ್ರ ಉದ್ಘಾಟಿಸಿ ಮಾತನಾಡಿದರು. ಕೃಷಿ ವಿಶ್ವವಿದ್ಯಾಲಯದ ಡೀನ್ ಸುರೇಶ ಎಸ್.ಪಾಟೀಲ್ ಮಾತನಾಡಿದರು. ಈ ಸಂದರ್ಭದಲ್ಲಿ ಆಹಾರ ನಾಗರಿಕರ ಸರಬರಾಜು ನಿರ್ದೇಶಕ ನಾಗಭೂಷಣ ಹೆಚ್, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಶಿವಪುತ್ರ ಅಲ್ಲಾಪುರ, ವೇದಿಕೆ ಸದಸ್ಯ ಅಶೋಕಕುಮಾರ ಕರಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.