ಶರಾಬ್ ದಂಧೆ ಬಂದ್ ಕರೋಃ MEP ಆಗ್ರಹ
ನೂತನ MEP ಪಕ್ಷದ ಬೃಹತ್ ಸಮಾವೇಶ
ಬೆಂಗಳೂರಃ ಮಹಿಳೆಯರ ವಿರುದ್ಧ ನಿರಂತರ ಅನ್ಯಾಯ ಅತ್ಯಾಚಾರ ತಡೆಗಟ್ಟಬೇಕಿದೆ. ಮಹಿಳೆಯರ ಬಗ್ಗೆ ಜನಪ್ರತಿನಿಧಿಗಳಿಗೆ ಕಾಳಜಿ ಇದ್ದಲ್ಲಿ ಮೊದಲು ಶರಾಬ್ ದಂಧೆ ಬಂದ್ ಮಾಡಿ ಎಂದು MEP ರಾಷ್ಟ್ರಧ್ಯಕ್ಷೆ ನೌಹೇರಾ ಶೇಖ್ ಆಗ್ರಹಿಸಿದರು.
ನಗರದ ಅರಮನೆ ಮೈದಾನದಲ್ಲಿ ಚುನಾವಣೆ ಅಂಗವಾಗಿ ಎಂಇಪಿ ಪಕ್ಷ ಆಯೋಜಿಸಿದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಉತ್ತಮ ಸಮಾಜ ನಿರ್ಮಾಣಕ್ಕೆ ಮಧ್ಯಪಾನ ಮಾರಾಟ ನಿಷೇಧಿಸುವ ಅಗತ್ಯವಿದೆ. ಮಹಿಳಾ ಸಬಲೀಕರಣ ಎಂದು ಎಲ್ಲಾ ಪಕ್ಷಗಳು ಬೊಬ್ಬೆ ಹೊಡೆಯುತ್ತಾರೆ. ಆದರೆ ನಿಜವಾಗಿ ಮಹಿಳಾ ಉದ್ಧಾರಕ್ಕೆ ಯಾವೊಂದು ಯೋಜನೆಯು ಪೂರಕವಾಗಿಲ್ಲ.
ಮಾನವೀಯತೆ ಆಧರದ ಮೇಲೆ ನ್ಯಾಯ ದೊರೆಯಬೇಕಿದೆ. ಮಾನವೀಯತೆ ನೆಲೆಯಲ್ಲಿ ನಮ್ಮ ಪಕ್ಷ ಸಂಘಟನೆ ನಡೆಯುತ್ತಿದೆ. ರಾಜ್ಯದಲ್ಲಿ ರೈತರಿಗೆ ಅನ್ಯಾಯವಾಗಿದೆ. ಮಹಿಳೆಯರ ಶಿಕ್ಷಣಕ್ಕಾಗಿ ಹಲವು ಯೋಜನೆಗಳು ರೂಪಿಸಬೇಕಿದೆ. ಹಿಂದೂ, ಮುಸ್ಲಿಂ ಕ್ರೈಸ್ತರು ಎನ್ನದೆ ನಾವೆಲ್ಲ ಒಂದಾಗಿ ಜಾತ್ಯಾತೀತ ತತ್ವದ ನಿಜ ಸ್ವರೂಪ ತೋರಿಸಬೇಕಿದೆ.
MEP ಪಕ್ಷ ರಾಷ್ಟ್ರೀಯ ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶ ಹೊಂದಿದೆ. ದೇಶದ ಮಹಿಳೆಯರನ್ನು ಒಗ್ಗೂಡಿಸುವ ಕೆಲಸವನ್ನು ನಮ್ಮ ಪಕ್ಷ ಮಾಡಲಿದೆ. ಬರುವ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಕಾರಣ ಮಹಿಳೆಯರು ರೈತರು ಇತರರು ಆಶೀರ್ವದಿಸಬೇಕೆಂದು ಮನವಿ ಮಾಡಿದರು.




