ಪ್ರಮುಖ ಸುದ್ದಿ
ಸೊನ್ನ ಬ್ಯಾರೇಜ್ಃ ಭೀಮಾನದಿಯಲ್ಲಿ ಕೊಚ್ಚಿ ಹೋದ ವಿದ್ಯುತ್ ಘಟಕ
ಸೊನ್ನ ಬ್ಯಾರೇಜ್ಃ ಭೀಮಾನದಿಯಲ್ಲಿ ಕೊಚ್ಚಿ ಹೋದ ವಿದ್ಯುತ್ ಘಟಕ
ವಿಜಯಪುರಃ ಜಿಲ್ಲೆಯ ಸೊನ್ನ ಬ್ಯಾರೇಜ್ ಪಕ್ಕದಲ್ಲಿ ನಿರ್ಮಿಸಲಾಗಿದ್ದ ವಿದ್ಯುತ್ ಘಟಕ ಭೀಮಾನದಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಘಟನೆ ಇದೀಗ ನಡೆದಿದೆ.
ಇದರಿಂದ ಭಾರಿ ಪ್ರಮಾಣದ ನೀರು ಹೊರ ಹರಿವು ಹೆಚ್ವಾಗಿದ್ದು, ಭೀಮಾನದಿ ರೌದ್ರನರ್ತನ ಶುರುವಾಗಿದೆ.
ಭೀಮಾನದಿ ತೀರದ ಗ್ರಾಮಗಳ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಯಾಬುದೇ ಕಾರಣಕ್ಕೂ ಹುಚ್ಷು ಸಾಹಸ ಮಾಡಬೇಡಿ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಕರೆ ನೀಡಿದ್ದಾರೆ.
ಕಲಬುರ್ಗಿ, ಯಾದಗಿರಿ, ರಾಯಚೂರ ಜಿಲ್ಲೆಯ ಭೀಮಾ ತೀರದ ಗ್ರಾಮಗಳಿಗೆ ಪ್ರವಾಹ ಆರ್ಭಟ ಜಾಸ್ತಿಯಾಗುವ ಸಾಧ್ಯತೆ. ಆ ಹಿನ್ನೆಲೆ ನದಿಪಾತ್ರದ ಜನರು ಎಚ್ಚೆತ್ತುಕೊಳ್ಳಬೇಕು.
ಪ್ರವಾಹ ಭೀತಿಯಲ್ಲಿದ್ದ ಜನರಿಗೆ ಸೊನ್ನ ಬ್ಯಾರೇಜ್ನ ವಿದ್ಯುತ್ ಘಟಕ ಕೊಚ್ಚಿಕೊಂಡು ಹೋಗಿರುವದು ದೊಡ್ಡ ದುರಂತ. ಅದರಿಂದ ಹೊರಹರಿವು ಹೆಚ್ವಾಗಿದ್ದು, ಜನರು ಮುಂಜಾಗೃತೆ ವಹಿಸಬೇಕು ಹೇಳಲಾಗುತ್ತಿದೆ.