ಪ್ರಮುಖ ಸುದ್ದಿ
WWEಗೆ ನಿವೃತ್ತಿ ಘೋಷಿಸಿದ ಜಾನ್ ಸೀನ

ಹದಿನಾರು ಬಾರಿಯ WWE ಚಾಂಪಿಯನ್ ಜಾನ್ ಸೀನ ಟೊರೊಂಟೊದಲ್ಲಿ ನಡೆದ ‘ಮನಿ ಇನ್ ದಿ ಬ್ಯಾಂಕ್’ ಕಾರ್ಯಕ್ರಮದಲ್ಲಿ ಆಶ್ಚರ್ಯಕರವಾಗಿ ಕಾಣಿಸಿಕೊಂಡು WWEಗೆ ನಿವೃತ್ತಿ ಘೋಷಿಸಿದ್ದಾರೆ. 2025ರಲ್ಲಿ ರಿಂಗ್‌ನಲ್ಲಿ ತನ್ನ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಜಾನ್ ಸೀನ ಹೇಳಿದ್ದಾರೆ. ಟೊರಾಂಟೊದಲ್ಲಿ ನಡೆದ ಮನಿ ಇನ್ ದಿ ಬ್ಯಾಂಕ್ ಲೈವ್ ಕಾರ್ಯಕ್ರಮದಲ್ಲಿ ಅಚ್ಚರಿಯ ಎಂಟ್ರಿ ಕೊಟ್ಟ ಜಾನ್ ಸೀನ ತನ್ನ ನಿರ್ಧಾರ ಪ್ರಟಿಸಿ ಅಭಿಮಾನಿಗಳಿಗೆ ಶಾಕ್ ನೀಡಿದರು. ಸೀನ ಧರಿಸಿದ್ದ ಟಿ ಶರ್ಟ್ ನಲ್ಲಿ ‘ದಿ ಲಾಸ್ಟ್ ಟೈಮ್ ಈಸ್ ನೌ” ಎಂದು ಬರೆದಿತ್ತು. “ಇಂದು ರಾತ್ರಿ, ನಾನು ಡಬ್ಲ್ಯೂ ಡಬ್ಲ್ಯೂಇ ನಿಂದ ನನ್ನ ನಿವೃತ್ತಿಯನ್ನು ಘೋಷಿಸುತ್ತೇನೆ” ಎಂದು ರಿಂಗ್‌ನೊಳಗೆ ಸೀನಾ ಹೇಳಿದರು.