Homeಪ್ರಮುಖ ಸುದ್ದಿಮಹಿಳಾ ವಾಣಿ
ಹೃದಯಾಘಾತಕ್ಕೆ 24 ವರ್ಷದ ಕೊಡಗಿನ ಯುವತಿ ಬಲಿ

ಕೊಡಗು : 24 ವರ್ಷದ ಯುವತಿಯೊಬ್ಬಳು ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. ಈ ಘಟನೆ ಮಡಿಕೇರಿ ತಾಲೂಕಿನ ನೆಲಜಿ ಗ್ರಾಮದಲ್ಲಿ ನಡೆದಿದೆ. ನಿಲಿಕ ಪೊನ್ನಪ್ಪ (24) ಮೃತ ಯುವತಿಯಾಗಿದ್ದಾಳೆ.
ಈಕೆ ನೆಲಜಿ ಗ್ರಾಮದ ಯುವತಿಯಾಗಿದ್ದಾಳೆ. ಇಂದು ಬೆಳಿಗ್ಗೆ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. ಮಣವಟ್ಟಿರ ಪೊನ್ನಪ್ಪ ಅವರ ಮಗಳು ನಿಲಿಕ. ಇಂದು ಬೆಳಿಗ್ಗೆ ಹೃದಯಾಘಾತ ಸಂಭವಿಸಿ ಪ್ರಾಣ ಬಿಟ್ಟಿದ್ದಾಳೆ. ಈಕೆ ಸಾವಿನಿಂದ ಕುಟುಂಬಸ್ಥರು ಹಾಗೂ ಮಡಿಕೇರಿ ಜನರು ದುಖಃ ತಪ್ತರಾಗಿದ್ದಾರೆ.