ಪ್ರಕೃತಿ ಸೊಬಗು ನಾಶ ಡಾ.ರಾಬರ್ಟ್ ಕಳವಳ
ಸ್ವಚ್ಛ ನಿಸರ್ಗ ಭವಿಷ್ಯದ ಸ್ವರ್ಗ
ಸೇಂಟ್ ಪೀಟರ್ ಶಾಲಾ ವಾರ್ಷಿಕೋತ್ಸವ ಸಮಾರಂಭ
ಯಾದಗಿರಿ, ಶಹಾಪುರಃ ಪ್ರಕೃತಿಯನ್ನು ಉಳಿಸಿಕೊಳ್ಳಬೇಕು ಅದನ್ನು ಬೆಳೆಸಬೇಕು. ಅಂದಾಗ ನಿಸರ್ಗ ಸ್ವರ್ಗಕ್ಕೆ ಸಮಾನ. ಪ್ರಕೃತಿ ರಕ್ಷಣೆ ಮಾಡದೇ ಹಾಳುಗೆಡುವಿದಲ್ಲಿ ನರಕಯಾತನೆ ಅನುಭವಿಸಬೇಕಾಗುತ್ತದೆ. ಬಾಲ್ಯದಿಂದಲೇ ಗಿಡ ಮರ ಬೆಳೆಸುವ ಕುರಿತು ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕೆಂದು ಕಲಬುರ್ಗಿ ಬಿಷಪ್ ಡಾ.ರಾಬರ್ಟ್ ಮೈಕಲ್ ಮಿರಂಡಾ ತಿಳಿಸಿದರು.
ನಗರದ ಸೇಂಟ್ ಪೀಟರ್ ಶಾಲಾ ಆವರಣದಲ್ಲಿ ವಾರ್ಷಿಕೋತ್ಸವ ಅಂಗವಾಗಿ ಸ್ವಚ್ಛ ನಿಸರ್ಗ ಭವಿಷ್ಯದ ಸ್ವರ್ಗ ಎಂಬ ವೇದವಾಕ್ಯದೊಂದಿಗೆ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಶಿಸ್ತು, ಸಂಯಮ ಸ್ವಚ್ಛತೆ ಇರಬೇಕು. ಯಾರು ಶಿಸ್ತು ರೂಢಿಸಿಕೊಳ್ಳುವರು ಅವರಲ್ಲಿ ವಿಧ್ಯೆ ಸುಲಭವಾಗಿ ಒಲಿಯಲಿದೆ. ಆ ನಿಟ್ಟಿನಲ್ಲಿ ಸೇಂಟ್ ಪೀಟರ್ ಶಾಲೆ ಶಿಸ್ತಿಗೆ ಹೆಚ್ಚಿನ ಮಾನ್ಯತೆ ನೀಡುತ್ತಾ ಬಂದಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಕಲಿತ ಸಂಸ್ಕಾರವೇ ಮುಂದೆ ಮಕ್ಕಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ.
ಮಕ್ಕಳನ್ನು ಬೆಳವಣಿಗೆಗೆ ಶಿಕ್ಷಕರು ಮತ್ತು ಪಾಲಕರ ಮೇಲೆ ಸಮಾನ ಜವಬ್ದಾರಿಯಿದೆ. ಬರಿ ಶಾಲೆಗೆ ಬಿಟ್ಟು ಹೋದರೆ ಮುಗೀತು ಎಂದುಕೊಳ್ಳವು ಪಾಲಕರಿದ್ದಾರೆ. ಅದು ಸರಿಯಲ್ಲ. ತಮ್ಮ ಮಕ್ಕಳ ಪ್ರಗತಿಗೆ ಪಾಲಕ ಪೋಷಕರ ಕಾಳಜಿಯು ಬಹು ಮುಖ್ಯವಾಗಿದೆ.
ಇನ್ನೂ ಪ್ರಕೃತಿ ವಿಕೋಪದಿಂದ ಸಾಕಷ್ಟು ಹಾನಿ ನಷ್ಟಗಳನ್ನು ಕಂಡಿದ್ದೇವೆ. ಇತ್ತೀಚೆಗೆ ಕೇರಳದಲ್ಲಿ ಜೀವಹಾನಿಯೊಡನೆ ಸಾಕಷ್ಟು ಜನರು ಆಸ್ತಿಪಾಸ್ತಿ ನಷ್ಟ ಅನುಭವಿಸಿದ್ದು ಕಂಡಿದ್ದೇವೆ. ವಾತಾವರಣ ವೈಪರೀತ್ಯದಿಂದ ಇಂತಹ ದುರ್ಘಟನೆ ಜರುಗುತ್ತಿವೆ.
ಕಾರಣ ನಾವೆಲ್ಲ ಪ್ರಕೃತಿಯನ್ನು ಪ್ರೀತಿಸಬೇಕು ಹಾರಾಧಿಸಬೇಕು. ಸಂರಕ್ಷಿಸಬೇಕು ಎಂದು ಕರೆ ನೀಡಿದರು. ಕಾಲ ಕಾಲಕ್ಕೆ ಮಳೆ ಬೆಳೆ ಚನ್ನಾಗಿದ್ದರೆ ನಮ್ಮೆಲ್ಲರ ಬದುಕು ಸುಂದರವಾಗಿರಲಿದೆ. ಈಗಾಗಲೇ ಪ್ರಕೃತಿ ಸಮತೋಲನ ಕಳೆದುಕೊಂಡಿದೆ. ಕೈಗಾರಿಕೆಯಿಂದ ಉಂಟಾದ ಉಷ್ಣತೆಯಿಂದ ಅಸಮತೋಲನ ಉಂಟಾಗಿದೆ. ನಿಸರ್ಗದ ಸೊಬಗಿ ನಾಶವಾಗಿದೆ. ಕಾರಣ ಈಗಿನಿಂದಲೇ ಮಕ್ಕಳಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕಿದೆ. ಇಲ್ಲವಾದಲ್ಲಿ ಮುಂದೆ ಘೋರ ಪರಿಣಾಮ ಹೆದರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪರಿಸರ ಸಂರಕ್ಷಣೆ, ರೈತನ ಕಷ್ಟ, ಸಾಲು ಮರದ ತಿಮ್ಮಕ್ಕ, ಮಳೆ, ಬೆಳೆ ಸೇರಿದಂತೆ ಪ್ರಚಲಿತ ವಿದ್ಯಾಮಾನಗಳ ಕುರಿತು ಗಮನ ಸೆಳೆಯುವ ಡ್ರಾಮ, ನೃತ್ಯದ ಮೂಲಕ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಮೆಡಲ್ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನಿಸಲಾಯಿತು. ವಿವಿಧ ಕ್ರೀಡೆಯಲ್ಲಿ ಸಾಧಿಸಿದ ವಿದ್ಯಾರ್ಥಿಗಳಿಗೂ ಮೆಡಲ್, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಫಾದರ್ ಫೆಡ್ರಿಕ್ ಡಿಸೋಜಾ, ಮುಖ್ಯೋಪಾದ್ಯಯಿನಿ ರೀನಾ ಸಿಡೋಜಾ, ನಗರಸಭೆಯ ಪ್ರಭಾರಿ ಪೌರಾಯುಕ್ತ ರವೀಂದ್ರ ಲಂಬೂ, ಅಬಕಾರಿ ಇಲಾಖೆ ಅಧಿಕಾರಿ ಬಸವರಾಜ ಜಮಗೊಂಡ, ಶಾಲಾ ಶಿಕ್ಷಕ ಮತ್ತು ಪಾಲಕರ ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಮುದನೂರ, ಶಾಲಾ ಸಂಸ್ಥೆ ಉಪಾಧ್ಯಕ್ಷ ಸುರೇಶ ರಡ್ಡಿ ಮತ್ತು ಸಿಸ್ಟರ್ ಮಿಲಾಗ್ರಿನ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಶೇಷವಾಗಿ ಜಪಾನ್ ದೇಶದಿಂದ ಆಗಮಿಸಿದ್ದ ಮಾರ್ಟೀನ್ ದಂಪತಿಯನ್ನು ಸನ್ಮಾನಿಸಿ ಗೌರವಸಿಲಾಯಿತು. ಶಿಕ್ಷಕ ಪೂರ್ಣಚಂದ್ರ ವಿದ್ಯಾರ್ಥಿನಿ ಅನುಷಾ ನಿರೂಪಿಸಿ ವಂದಿಸಿದರು.