ಇವರು ಹಳ್ಳಿಗಳ ಕಡೆ ಕಾಲಿಟ್ಟರೆ ಕೈ, ಕಾಲು ಕಡಿಯುತ್ತಾರೆ – ಕೋಡಿಹಳ್ಳಿ ಚಂದ್ರಶೇಖರ
ಇವರು ಹಳ್ಳಿಗಳ ಕಡೆ ಕಾಲಿಟ್ಟರೆ ಕೈ, ಕಾಲು ಕಡಿಯುತ್ತಾರೆ – ಕೋಡಿಹಳ್ಳಿ ಚಂದ್ರಶೇಖರ
ಬೆಂಗಳೂರಃ ರೈತ ವಿರೋಧೆ ಕಾಯ್ದೆ ಜಾರಿಯನ್ನು ವಿರೋಧಿಸಿ ಇಂದು ಕರೆ ನೀಡಿದ್ದ ರಾಜ್ಯ ಬಂದ್ ಪ್ರತಿಭಟನೆಯಲ್ಲಿ ಕಾವು ಜೋರಾಗುತ್ತಿದ್ದು, ನಗರದೆಲ್ಲಡೆಯಿಂದ ರೈತರು ಪ್ರತಿಭಟನಾ ಮೆರವಣಿಗೆ ಮೂಲಕ ಟೌನ್ ಹಾಲ್ ಹತ್ರ ಜಮಾವಣೆಗೊಳ್ಳುತ್ತಿದ್ದಾರೆ.
ಟೌನ್ ಹಾಲ್ ನಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿ ಎಂದು ಪ್ರತಿಭಟನಾಕಾರರು ಮಾಹಿತಿ ನೀಡಿದ್ದಾರೆ.
ಈ ವೇಳೆ ಮಾಧ್ಯಮಕ್ಕೆ ಹೇಳಿಕೆ ನೀಡಿದ ಕೋಡಿಹಳ್ಳಿ ಚಂದ್ರಶೇಖರ, ಎಪಿಎಂಸಿ ಮತ್ತು ಭೂಸುಧಾರಣೆ ತಿದ್ದುಪಡಿ ಕಾಯ್ದೆ ಜಾರಿ ರೈತರಿಗೆ ಮರಣ ಶಾಸನವಾಗಲಿದೆ.
ಹಿಂದೆ ಗಾಂಧೀಜಿಯವರು ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ದೊಡ್ಡಮಟ್ಟದ ಚಳುವಳಿ ನಡೆಸುವ ಮೂಲಕ ಯಶಸ್ವಿಯಾಗುವ ಮೂಲಕ ಸ್ವಾತಂತ್ರ್ಯ ತಂದು ಕೊಟ್ಟಿದ್ದರು. ಇದೀಗ ನಮ್ಮ ದೇಶದ ಕಂಪನಿಗಳ ವಿರುದ್ಧವೇ ನಾವೆಲ್ಲ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದ ಅವರು, ಮಸೂದೆ ವಾಪಾಸ್ ಪಡೆಯದಿದ್ದರೆ, ಇವರೇನಾದ್ರೂ ಹಳ್ಳಿಗಳ ಕಡೆ ಹೋದರೆ ಜನ ಕೈಕಾಲು ಮುರಿಯುತ್ತಾರೆ ಎಂದು ಅವರು ತಿಳಿಸಿದರು.