ಸ್ಯಾಂಟ್ರೋ ಕಾರಿನ ಡಿಕ್ಕಿಯೊಳಗೆ ಗಣೇಶ..!
ಹೊಸೂರಲ್ಲಿ ಹೊಸತನದಿ ಗಣೇಶ ಸ್ಥಾಪಿಸಿದ ಮಕ್ಕಳು
ಕಾರಿನ ಡಿಕ್ಕಿಯೊಳು ಚಿಣ್ಣರ ಗಣೇಶ, ಮಕ್ಕಳಿಂದ ನಿತ್ಯ ಪೂಜೆ ಭಜನೆ
ಮಲ್ಲಿಕಾರ್ಜುನ ಮುದ್ನೂರ
ಶಹಾಪುರಃ ಗಣೇಶನ ಹಬ್ಬಕ್ಕೆ ವೇದಿಕೆ ಸಿದ್ಧತೆ ಮಾಡಿಕೊಂಡು ಗಣೇಶ ಮೂರ್ತಿ ಸ್ಥಾಪನೆ ಮಾಡುವದು ಕಂಡಿದ್ದೀರಿ ಆದರೆ ಈ ಗ್ರಾಮದ ಮಕ್ಕಳು ಕಾರಿನ ಡಿಕ್ಕಿಯಲ್ಲಿ ಗಣೇಶನನ್ನು ಸ್ಥಾಪಿಸಿ ನಿತ್ಯ ಪೂಜೆ, ಭಜನೆ ಮಾಡುತ್ತಿದ್ದಾರೆ.
ಹೌದು..ತಾಲೂಕಿನ ಹೊಸೂರ ಗ್ರಾಮದಲ್ಲಿ ಮಕ್ಕಳು ಸ್ಯಾಂಟ್ರೋ ಹೊಂಡೈ ಕಾರಿನ ಡಿಕ್ಕಿಯೊಳಗೆ ಗಣೇಶ ಸ್ಥಾಪನೆ ಮಾಡುವ ಮೂಲಕ ನಿತ್ಯ ಶ್ರದ್ಧಾ ಭಕ್ತಿಯಿಂದ ಪೂಜೆ ಭಜನೆ ಮಾಡುವ ಮೂಲಕ ಗ್ರಾಮಸ್ಥರ ಗಮನ ಸೆಳೆದಿದ್ದಾರೆ.
ಕಾರಿನ ಡಿಕ್ಕಿಯಲ್ಲಿ ಗಣೇಶ ಸ್ಥಾಪನೆಗೆ ಸ್ವಚ್ಛಗೊಳಿಸಿ ಅಲಂಕರಿಸಿದ್ದಾರೆ. ಅದರಲ್ಲಿ ಸಣ್ಣ ಟೇಬಲ್ ಮಣೆ ಇಟ್ಟು ಗಣೇಶನ್ನು ಸ್ಥಾಪಿಸಿದ್ದಾರೆ.
ಸರಳ ಮತ್ತು ಸುಂದರ, ಭಕ್ತಿ ಪೂರ್ವಕ ಗಣೇಶೋತ್ಸವವನ್ನು ಆಚರಿಸುವ ಮೂಲಕ ಮಕ್ಕಳು ಎಲ್ಲರ ಮನ ಗೆದ್ದಿದ್ದಾರೆ. ಅಲ್ಲದೆ ಗ್ರಾಮಸ್ಥರು ಈ ಗಣೇಶ ಸ್ಥಳಕ್ಕೆ ಬಂದು ನಮಿಸುವ ಮೂಲಕ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಮಕ್ಕಳಿಗೆ ವಿದ್ಯಾ ಬುದ್ಧಿ ವರ ನೀಡುವ ಗಣಪನ ಪೂಜೆ ಮಾಡಲೇಬೇಕೆಂಬ ಮಕ್ಕಳ ಆಸೆಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಗುರುಲಿಂಗಪ್ಪ ಸಾಹು ಅಂಗಡಿ ಐದು ದಿನಗಳವರೆಗೆ ಗಣೇಶನ ಉತ್ಸವ ಆಚರಣೆಗೆ ತಮ್ಮ ಕಾರೊಂದನ್ನು ನೀಡುವ ಮೂಲಕ ನಿತ್ಯ ಅವರಿಗೆ ಪ್ರೊತ್ಸಾಹ ನೀಡುತ್ತಿದ್ದಾರೆ.
ಮಕ್ಕಳಾದ ಮನೋಜ ಜಿ.ಅಂಗಡಿ, ಭರತ್ ಚಿಂತಿ, ಗೌರೀಶ್, ನವಾಜ್, ಸಂಕೇತ, ಬಿಂದು ಅಂಗಡಿ, ಟೈಸಿನ್, ಮಲ್ಲಿಕಾರ್ಜುನ ಸೇರಿದಂತೆ ಇತರರು ಭಾಗವಹಿಸಿದ್ದರು.
ಮಕ್ಕಳು ಎಲ್ಲರೂ ಗಣೇಶ ಸ್ಥಾಪನೆಗೆ ದೇಣಿಗೆ ಕೇಳಲು ಬಂದಿದ್ದರು. ಗ್ರಾಮದ ರೈತರು ಮೊದಲೇ ಬರಗಾಲದ ಛಾಯೆಯಲ್ಲಿದ್ದು, ಅಷ್ಟೊಂದು ಹಣ ನೀಡುವದು ಕಷ್ಟ ಎನಿಸಿತು, ಮಕ್ಕಳು ದೇಣಿಗೆ ಕೇಳಿದ್ದಾವೆ ಎಂದು 5-10 ರೂ. ನೀಡಬಹುದು. ಅದರಿಂದ ಗಣೇಶ ಸ್ಥಾಪನೆ ಕಷ್ಟಕರ. ಹೀಗಾಗಿ ಕಾರಿನೊಳಗೆ ವೇದಿಕೆ ಸಿದ್ಧಪಡಿಸಿ, ಅವರ ಆಸೆಗೆ ಪ್ರೋತ್ಸಾಹಿಸಿದೆ.
-ಗುರು ಅಂಗಡಿ. ಗ್ರಾಮದ ಮುಖಂಡರು.
ಸರ್ ಸುದ್ದಿ ತುಂಬಾ ಅಚ್ಚುಕಟ್ಟಾಗಿ ಮಾಡಿದಕ್ಕಾಗಿ ಧನ್ಯವಾದಗಳು