ದೇಹಕ್ಕೆ ಕಾರ್ಯಕ್ಷಮತೆ ಮನಸ್ಸಿಗೆ ಉತ್ಸಾಹ ಅಗತ್ಯಃ ಸಿದ್ದೇಶ್ವರ ಶ್ರೀವಾಣಿ
ತಪಸ್ಸು ಮಾಡುವ ಮನಷ್ಯ ಸಾಹಸಿಯಂತೆ ಬದುಕುತಾನ..
ಕಲಬುರ್ಗಿಯಲ್ಲಿ ನಡೆಯುತ್ತಿರುವ ಸಿದ್ದೇಶ್ವರ ಶ್ರೀಗಳ ಪ್ರವಚನ
ಕಲಬುರ್ಗಿಃ ದೇಹ ಮತ್ತು ಮನಸ್ಸು ಎರಡು ಬಲಾಢ್ಯ ಸಾಧನೆಗಳು. ಅವು ಎಷ್ಟು ಸಮರ್ಥವಾಗಿ ಇರ್ತವಾ..ನಾವು ಎಷ್ಟು ಅವುಗಳನ್ನು ಚನ್ನಾಗಿ ಬೆಳೆಸ್ತೀವಿ ಅಷ್ಟು ನಾವು ಬದುಕಿನಲ್ಲಿ ಸಿದ್ಧಿ ಪಡ್ತೀವಿ. ಅದು ಸಾಮಾನ್ಯ ಸಿದ್ದಿ ಇರಬಹುದು ಅಸಾಮಾನ್ಯ ಸಿದ್ಧಿ ಇರಬಹುದು.
ಮನಸ್ಸಿನಲ್ಲಿ ಉತ್ಸಾಹ ದೇಹದಲ್ಲಿ ಕಾರ್ಯಕ್ಷಮತೆ ಇವರೆಡು ಬೇಕು. ಬರಿ ಮನಸ್ಸಿನಲ್ಲಿ ಉತ್ಸಾಹ ಇದ್ರೂ ಹಾಗಲ್ಲ. ದೇಹದಲ್ಲಿ ಕಾರ್ಯಕ್ಷಮತೆ ಇದ್ರೂ ಹಾಗಲ್ಲ. ಬೆಟ್ಟವನ್ನು ಏರಬೇಕು ಎಂಬ ಉತ್ಸಾಹ ಅದ. ಆದರ ದೇಹದ ಕಾರ್ಯಕ್ಷಮತೆ ಇಲ್ಲದೆ ಇದ್ರೆ ಬೆಟ್ಟವನ್ನು ಹೇಗೆ ಏರಲು ಸಾಧ್ಯ. ದೇಹದಲ್ಲಿ ಕಾರ್ಯಕ್ಷಮತೆ ಶಕ್ತಿ ಮನಸ್ಸಿನಲ್ಲಿ ಉತ್ಸಾಹ ಇವೆರಡು ಇದ್ರೆ ಏರಬಹುದು. ಮನುಷ್ಯನಿಗೆ ದೇಹದಲ್ಲಿ ಶಕ್ತಿ ಮನಸ್ಸಿನಲ್ಲಿ ಉತ್ಸಾಹ ಇವೆರಡು ಬಹುಮುಖ್ಯ.
ಯಾವುದೆ ಕೆಲಸದಲ್ಲೂ ತಪಸ್ಸು ಬೇಕು. ತಪ್ಪಸಿನಿಂದ ದೇಹದಲ್ಲಿ ಅಡಗಿರುವ ನಿರುತ್ಸಾಹ ತೆಗೆತದ..ಮನಸ್ಸಿನ ಉತ್ಸಾಹ ಹೆಚ್ಚಾಗ್ತದ..ಅದಕ ತಪಸ್ಸು ತಪಸ್ಸು ಅಂತ ಕರದಾರ.. ಕಷ್ಟವಿಲ್ಲದೆ ಶ್ರೇಷ್ಠವಾದದನ್ನು ಪಡೆಯುವದಕ್ಕೆ ಸಾಧ್ಯವೇ ಇಲ್ಲ ಈ ಜಗತ್ತಿನಲ್ಲಿ. ತಪಸ್ಸು ಅಂದ್ರೆ ಸಹನಾ ಮಾಡಿಕೊಳ್ಳಬೇಕು. ಎಷ್ಟು ವರ್ಷಗಳ ಕಾಲ ಸಹನೆಯಿಂದರಬೇಕಾಗುತ್ತದೆ. ಸಿದ್ಧಿ ಪಡೆಯುವವರೆಗೂ ಸಹನವಹಿಸಬೇಕಾಗುತ್ತದೆ. ಕೋಪ, ತಾಪ ಕ್ರೋಧ ಎಲ್ಲವನ್ನು ತಡೆದುಕೊಂಡು ನಿಸ್ಸಂಕೋಚವಾಗಿ ಸಮಧಾನವಹಿಸಬೇಕು ಇದು ಒಂದ್ ತಪಸ್ಸು..
ಶರಣೆ ಅಕ್ಕಮಹಾದೇವಿ ಹೇಳಿದಂತೆ, ಬೆಟ್ಟದ ಮೇಲೆ ಮನೆ ಕಟ್ಟಿದ ಬಳಿಕ ಮೃಗಗಳಿಗೆ ಅಚಿಜಬಾರದು, ಸಮುದ್ರ ತಟದಲ್ಲಿ ಮನೆ ಕಟ್ಟಿದ ಮೇಲೆ ನೆರೆತೊರೆಗಳಿಗೆ ಅಂಜಬಾರದು. ಸಂತೆಯೊಳಗೆ ಮನೆ ಕಟ್ಟಿದ ಮೇಲೆ ಶಬ್ಧಕ್ಕೆ ಅಂಜಬಾರದು ಅದನ್ನು ಮೀರಿ ನಿಲ್ಲಬೇಕು. ಸಹನ ಮಾಡಬೇಕು. ಸಮಧಾನದಿಂದ ಇರಬೇಕು ಅವಕ್ಕೆಲ್ಲ ಅಂಜಲಾರದೆ ಹಾಗೇ ಬದುಕಬೇಕು. ಅದು ಹಂಗ ಅದ ಅದನ್ನು ಮೀರಿ ಬದುಕಬೇಕು ಸಮಧಾನಿಯಾಗಿ ಇರಬೇಕು ಸಹಿಸಿಕೋ ಬೇಕು. ಸಂತೆಯಲ್ಲಿ ಯಾರಾದರೂ ಶಬ್ಧ ಮಾಡಬಾರದು ಎಂದು ಸಂತೆಯಲ್ಲಿ ಬೋರ್ಡ ಹಾಕಲು ಸಾಧ್ಯವೇನು. ಸಂತೆಗೆ ನಾವು ಹೋಗಿವಿ ಅದನ್ನು ಮೀರಿ ನಿಲ್ಲಬೇಕು. ಸಹನ ಮಾಡಿಕೊಳ್ಳಬೇಕು ಅಂದ್ರೆ ಸಹಿಕೋಬೇಕು ತಾಪ ಮಾಡಿಕೊಳ್ಳದಲ್ಲ.
ಲೋಕದಲ್ಲಿ ಹುಟ್ಟಿಬಂದ ಬಳಿಕ ಲೋಕದನಿಂದೆ ಸ್ತುತಿನಿಂದೆಗೆ ಅಂಜಬಾರದು. ಎಲ್ಲವು ಬರುತ್ತದೆ. ಹೊಗಳಿಕೆ ಇದ್ದ ಮೇಲೆ ಅದರಷ್ಟೆ ನಮ್ಮನ್ನು ಬೈಯುವವರು ಇದ್ದಾರ. ನಿಸರ್ಗ ದೇವರನ್ನೇ ಒಮ್ಮೊಮ್ಮೆ ಬೈಯ್ತಿರ್ತೀವಿ. ದೇವರು ಏನು ಕೊಟ್ಟಿದ್ದಾನ ಎಂದು ಪ್ರಶ್ನೆ ಮಾಡ್ತೀವಿ ಹೂವು ತಂದಿಟ್ಟು ಪೂಜೆ ಮಾಡಿದರೂ ಏನು ಕೊಟ್ಟ ಅಂತೀವಿ. ಆದರೆ ವಿಚಾರ ಮಾಡಿ ಹೂವಿನೊಳ ಅದೆಂತಹ ಸುಗಂಧ ಕೊಟ್ಟಿದ್ದಾನ. ಹೂವಿಗೆ ಮಕರಂದ ಕೊಟ್ಟಿದ್ದು ಯಾರು ಯೋಚನೆ ಮಾಡಬೇಕು.
ನಿಂತರೂ ಬೈಯ್ಯುತ್ತಾರೆ ನಿಂತ್ರೂ ಜನ ಅಂತಾರ..ಹೆಂಗ ನಿಂತದ ನೋಡ ಹೆಂಗ ಕುಂತದ ನೋಡ..ಏನ್ಮಾಡೋದು..ಲೋದೊಳು ಹುಟ್ಟಿ ಬಂದ ಮೇಲೆ ಅಂತವರು ಇರ್ತಾರ..ಇಂತವರು ಇರ್ತಾರ..ಎರಡು ಇರ್ತಾವ ಎರಡಿ ಬಂದಾಗಲು ಸಹಿತ ಮನಸ್ಸಿನಲ್ಲಿ ಕೋಪವ ತಾಳದೆ ಸಮಧಾನಿಯಾಗಿರಬೇಕಲ್ಲ ಅದು ತಪಸ್ಸು.. ಜೀವನದ ಮೊದಲಿನಿಂದ ಕೊನೆಯವರೆಗೂ ಅದು ಬರಬೇಕಾದ ತಪಸ್ಸು ಸಹನಾಶೀಲತಾ ಕಷ್ಟಗಳನ್ನು ಸಹಿಸುವ ಸಾಮರ್ಥ್ಯ. ಯಾರ ಜೀವನದಲ್ಲಿ ಕಷ್ಟಗಳು ಬರುವದಿಲ್ಲ. ಎಲ್ಲರ ಜೀವನದಲ್ಲಿ ಕಷ್ಟಗಳು ಬರ್ತವ..ಎಲ್ಲವೂ ತಪಸ್ಸಿನ ಮೇಲೆ ನಿಲ್ಲವದು..
ಶರೀರದಲ್ಲಿ ಪುಪ್ಪಸ ಅದ ಏನೆಲ್ಲ ಅದ. ಎಂತಹ ಕೆಲಸ ಮಾಡ್ತಾವ ದೇಹದೊಳಗ. ಕೈ.ಕಾಲು ತಲೆ ಅಷ್ಟೆ ಏಕೆ ಎಲ್ಲಾ ಇಂದ್ರಿಯಗಳು ವಿಶ್ರಾಂತಿ ತೆಗೆದುಕೊಳ್ಳುತ್ತದ. ಪುಪ್ಸಸ ತನ್ನ ಕೆಲಸವನ್ನು ಮುಂದುವರೆಸುತ್ತದೆ. ರಕ್ತವನ್ನು ಶುದ್ಧ ಮಾಡಿ ಸರಬರಾಜು ಮಾಡ್ತಿರತದ ಅದರ ಕೆಲಸ ಅದು ಮಾಡತದ ವಿಶ್ರಾಂತಿ ಇಲ್ಲ ಅದಕ. ಈ ದೇಹದೊಳಗಿನ ಒಂದು ಹೃದಯ ಇಷ್ಟು ತಪಸ್ಸು ಮಾಡುತ್ತದೆ. ಅದು ಒಂದು ದಿನ ರಜೆ ಕೇಳಿದರೆ ದೇಹದ ಗತಿ. ಇದರಂತೆ ಪ್ರತಿ ಮನೆಯಲ್ಲಿ ತಾಯಿ ಎನ್ನುವ ಒಂದು ಹೃದಯ ವಿಶ್ರಾಂತಿ ಇಲ್ಲದೆ ದುಡಿತದ..ಅದಕ್ಕೆ ಅವರನ್ನು ತಪಸ್ವಿನಿ ಅಂತಾರ.
ಗಂಡು ಜರ್ನಿ ಮಾಡಿ ಬಂದಾರ ಅವರಿಗೆ ದಣಿವಾಗಿರತದ. ಆದರೆ ಬೆಳಗ್ಗಿನಿಂದ ನಿರಂತರ ಬದುಕಿನ ಹೃದಯದಂತೆ ಮಕ್ಕಳು, ಪತಿ ಅತಿಥಿಗಳೆಲ್ಲ ಮಲಗಿರ್ತಾರ ಆದರೂ ತನ್ನ ಕೆಲಸ ನಿಲ್ಲಿಸುವದಿಲ್ಲ. ನಸುಕಿನಲ್ಲಿ ಎದ್ದು ಸ್ವಚ್ಛ ಮಾಡಿ ಮನೆ ಮುಂದೆ ರಂಗವಲ್ಲಿ ಹಾಕಿದ ಮೇಲೆ ಮನೆಯ ಕಳೆ ಶುರುವಾಗ್ತಿರತದ. ಅಡುಗೆ ಮನೆ ಶ್ರೀಮಂತ ಅಡುಗೆ ಮನೆ, ಮನೆ ಸ್ವಚ್ಛ ಹೊರಗ ರಂಗವಲ್ಲಿ ಅದರ ಕಳೆ ಇದು ಸುಮ್ಮನೆ ಅಲ್ಲ. ದಿನಾಲು ಮಾಡ್ತಾಳ ಆ ತಾಯಿ. ಯಾವಗಲೂ ಒಮ್ಮೆ ಮಾಡೋದು ಬ್ಯಾರೆ. ಮನೆಯೋರು ಊರಿಗೆ ಹೋದಾಗ ಒಂದು ದಿನ ಮಾಡಿದ್ದಲ್ಲ. ಪತ್ನಿಯರನ್ನು ಊರಿಗೆ ಕಳುಹಿಸಿ ಒಂದು ವಾರ ನೀವು ಅವರ ಕೆಲಸ ಮಾಡಿ ನೋಡು ತಿಳಿತದ.
ಒಂದು ದಿನ ದೀಪ ಉರಿತಿತ್ತ ಮನೆಯೊಳಗ ಅದರ ಮನಸ್ಸು ಅವಾಗ ಗೊತ್ತಾಗಲ್ಲ. ದೀಪ ಉರಿಯುವಾಗ ಅದರ ಕಡೆಗೆ ಯಾರ ಲಕ್ಷ್ಯ ಕೊಡುವದಿಲ್ಲ. ದೀಪ ಅಂತದ ನನ್ನ ಕಡೆ ಯಾರು ಲಕ್ಷ್ಯ ಕೊಡಲಿಲ್ಲ. ಸುಮ್ಮನೆ ನಾ ಹಾರಿಹೋದರಾಯ್ತು ಅಂತು ಹಾರಿತು. ಹಾಗ ಎಲ್ಲರೂ ದೀಪ ಹಾರಿತು ನೋಡು ಅಂತ ಎಲ್ಲರೂ ಅದರ ಕಡೆ ಲಕ್ಷ್ಯ ಕೊಡ್ತಾರ. ಹೀಗೆ ಹಲವು ನಿದರ್ಶನ ವಚನಗಳ ಮೂಲಕ ಶ್ರೀಗಳು ತಮ್ಮ ಅಮೃತವಾಣಿ ಸಾರ ಬಿತ್ತರಿಸಿದರು.