Homeಅಂಕಣಜನಮನಪ್ರಮುಖ ಸುದ್ದಿ
ಕರ್ನಾಟಕದಲ್ಲಿ ಒಂದೇ ದಿನ 175 ಮಂದಿಗೆ ಡೆಂಗ್ಯೂ ಸೋಂಕು ದೃಢ.!

ಕರ್ನಾಟಕದಲ್ಲಿ ಡೆಂಗ್ಯೂ ಸೋಂಕಿನ ಅಬ್ಬರ ಹೆಚ್ಚಾಗಿದೆ. ರಾಜ್ಯದಲ್ಲಿ ಜು.6ರಂದು ಒಂದೇ ದಿನ 175 ಮಂದಿಗೆ ಡೆಂಗ್ಯೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 115, ಮಂಡ್ಯ 26, ಗದಗ 8, ವಿಜಯಪುರ 9, ಉಡುಪಿ 2, ಉತ್ತರ ಕನ್ನಡ, ಬಳ್ಳಾರಿ ಜಿಲ್ಲೆಯಲ್ಲಿ ತಲಾ ಒಂದೊಂದು
ಪ್ರಕರಣಗಳು ದಾಖಲಾಗಿವೆ. ಈ ವರ್ಷದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 7000 ಗಡಿ ದಾಟಿದೆ. ಡೆಂಗ್ಯೂ ಸೋಂಕಿಗೆ ಒಂದೇ ತಿಂಗಳಿನಲ್ಲಿ 6 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ