ಪ್ರಮುಖ ಸುದ್ದಿ

ಶಹಾಪುರ: ದೇಸಾಯಿ ಡೈಮೆಂಡ್ – ಹಳಪೇಟೆ ಲಾಯನ್ಸ್ ನಡುವೆ ಆಕರ್ಷಕ ಆಟ

ದೇಸಾಯಿ ಡೈಮೆಂಡ್, ಹಳಪೇಟೆ ಲಾಯನ್ಸ್ ನಡುವೆ ಆಕರ್ಷಕ ಆಟ

yadgiri, ಶಹಾಪುರ: ನಗರದ ಡಿಗ್ರಿ ಕಾಲೇಜು ಮೈದಾನದಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಎಸ್‍ಪಿಎಲ್ ಕ್ರಿಕೆಟ್ ಪಂದ್ಯವು ಯುವ ಕ್ರೀಡಾಸಕ್ತರ ಗಮನ ಸೆಳೆದಿದ್ದು, ದಿನಾಂಕ 19-11-2020ರಂದು ನಡೆದ ದೇಸಾಯಿ ಡೈಮೆಂಡ್ ಮತ್ತು ಹಳಪೇಟೆ ಲಾಯನ್ಸ್ ನಡುವೆ ನಡೆದ ಪಂದ್ಯ ಕ್ರೀಡಾಂಗಣಕ್ಕೆ ಕಳೆ ಕಟ್ಟಿತ್ತು.

ಕ್ರೀಡಾಪಟು ವಿಶ್ವ ಹಳಪೇಟೆ 14ಸಿಕ್ಸರ್, 8ಬೌಂಡರಿ ಒಟ್ಟು 121 ರನ್‍ಗಳಿಸಿ ದೇಸಾಯಿ ಡೈಮಂಡ್ಸ್‍ನ 159 ಸ್ಕೋರ್‍ನ ಗುರಿ ತಲುಪಿ ಹಳಪೇಟೆ ಲಾಯನ್ಸ್‍ಗೆ ಜಯ ತಂದುಕೊಟ್ಟು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ದೇಸಾಯಿ ಡೈಮಂಡ್‍ನ ಮೈಸನ್ ಚಾವೂಸ 108 ರನ್ ಬಾರಿಸಿ ಆಕರ್ಷಕ ಆಟ ಪ್ರದರ್ಶಿಸಿದರು.

ಆನ್‍ಲೈನ್ ಸ್ಕೋರ್ ಮೂಲಕವೂ ಪಂದ್ಯ ಪ್ರಾರಂಭವಾದಾಗಿನಿಂದ ಇಲ್ಲ್ಲಿಯವರೆಗೆ 1 ಲಕ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಕ್ರೀಡಾಸಕ್ತರು ವೀಕ್ಷಿಸುತ್ತಿರುವುದು ಕ್ರೀಡಾ ಆಯೋಜಕರಿಗೆ ಉತ್ಸಾಹ ತಂದಿದೆ.

ಸರ್ವರ ಸಹಕಾರದಿಂದ ಟೂರ್ನಾಮೆಂಟ್ ನಡೆದಿದ್ದು, ಒಟ್ಟು 10 ತಂಡಗಳು ಪಾಲ್ಗೊಂಡಿವೆ. 20 ದಿನಗಳವರೆಗೆ ಪಂದ್ಯಗಳು ನಡೆಯುತ್ತಿದ್ದು, ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನ ವಿತರಿಸಲಾಗುತ್ತಿದೆ. ಪಂದ್ಯದ ಆಯೋಜಕ ಮೌನೇಶ ನಾಟೇಕಾರ ಈ ಕುರಿತು ಅಭಿಪ್ರಾಯ ಹಂಚಿಕೊಂಡು ಯುವಕರು ದಿನನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಆರೋಗ್ಯದ ಕಾಳಜಿ ಇಟ್ಟುಕೊಂಡು ಕ್ರೀಕೆಟ್ ವೀಕ್ಷಿಸಲು ಬರುತ್ತಿದ್ದು, ಎಲ್ಲರ ಪ್ರೋತ್ಸಾಹ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ.

ಅಲ್ಲದೆ ವೀಕ್ಷಕರು ಕ್ರೀಡಾಪಟುಗಳಿಗೆ ವಿಶೇಷ ಬಹುಮಾನ ನೀಡುವ ಮೂಲಕ ಶುಭ ಹಾರೈಸುತ್ತಿದ್ದಾರೆ. ಸಗರನಾಡಿನಲ್ಲಿ ಕ್ರಿಕೇಟ್‍ನ ಅದ್ಭುತ ಪ್ರತಿಭೆಗಳು ಇದ್ದು, ಅವರನ್ನು ಮುಖ್ಯವಾಹಿನಿಗೆ ತಂದು ರಾಜ್ಯಕ್ಕೆ ಪರಿಚಯಿಸಬೇಕಾದ ಅಗತ್ಯತೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪಂದ್ಯಶ್ರೇಷ್ಠ ಪ್ರಶಸ್ತಿ ಕೊಡುವ ಸಂದರ್ಭದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ರಾಯಪ್ಪ ಸಾಲಿಮನಿ, ದೈಹಿಕ ಶಿಕ್ಷಕ ಸುರೇಶ ಮಡ್ಡಿ ಉಪಸ್ಥಿತರಿದ್ದರು, ಕನ್ನಡ ಸೇನೆಯ ದೇವು ಭೀ.ಗುಡಿ ಕಾಮೆಂಟ್ರಿ ಜೊತೆ ಕಾರ್ಯಕ್ರಮ ಕುರಿತು ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button