ಪ್ರಮುಖ ಸುದ್ದಿ
ವಿದ್ಯುತ್ ಟ್ರಾನ್ಸಫಾರ್ಮರ್ (TC) ಕಳ್ಳರ ಬಂಧನ
ವಿದ್ಯುತ್ ಟ್ರಾನ್ಸಫಾರ್ಮರ್ ಕಳ್ಳರ ಬಂಧನ, 8 TC ವಶಕ್ಕೆ
ವಿಜಯಪುರಃ ವಿದ್ಯುತ್ ಟ್ರಾನ್ಸಫಾರ್ಮರ್ (ಟಿಸಿ) ಕಳ್ಳತನದಿಂದ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು.
ಇದರಿಂದ ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಅನುಭವಿಸಲಾಗಿತ್ತು.
ಆದರೆ ಪೊಲೀಸರ ಕ್ಷೀಪ್ರ ಕಾರ್ಯಾಚರಣೆಯಿಂದ ನಾಲ್ಕು ಜನ ಟಿಸಿ ಕಳ್ಳರನ್ನು ಬಂಧಿಸಿರುವುದು ನೆಮ್ಮದಿ ಮೂಡಿಸಿದೆ ಎಂದು ವಿದ್ಯುತ್ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಟಿಸಿ ಕಳ್ಳರನ್ನು ಜಿಲ್ಲೆಯ ಬಸವನ ಬಾಗೇವಾಡಿ ಪೊಲೀಸರು ಬಂಧಿಸಿದ್ದಾರೆ.
ಬಸವರಾಜ ಮದ್ದರಕಿ(35), ಮಡಿವಾಳಪ್ಪ ಅಗ್ನಿ (30), ಅಂಬರೀಶ ಬಳುಂಡಗಿ(32), ಈರಪ್ಪ ಪೂಜಾರಿ(24), ಬಸವರಾಜ ಯಾಳವಾರ(40) ಬಂಧಿತ ಆರೋಪಿಗಳಾಗಿದ್ದಾರೆ.
ಅಲ್ಲದೆ ಪೊಲೀಸರು ಬಂಧಿತರಿಂದ 2.30 ಲಕ್ಷ ಮೌಲ್ಯದ 8 ಟಿಸಿಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿತರು ವಿಜಯಪುರ ಸೇರಿದಂತೆ ಬಸವನಬಾಗೇವಾಡಿ, ಮುದ್ದೇಬಿಹಾಳ, ತಾಳಿಕೋಟಿ ಸೇರಿದಂತೆ ಇತರಡೆ ಟಿಸಿಗಳನ್ನು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಬಸವನಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎನ್ನಲಾಗಿದೆ.