ಪ್ರಮುಖ ಸುದ್ದಿ
ಐಡಿ ಕಾರ್ಡ್ ನೀಡುವದು ತಡವಾಯಿತೆಂದು ರೈಲಿಗೆ ಬೆಂಕಿ ಇಟ್ಟ ಯುಗ ಪುರುಷ.!
ಹರಿದ್ವಾರಃ ಐಡಿ ಕಾರ್ಡ್ಕೊಡಲು ತಡವಾಯಿತೆಂದು ರೊಚ್ಚಿಗೆದ್ದ ವ್ಯಕ್ತಿಯೋರ್ವ ರೈಲಿಗೆ ಬೆಂಕಿ ಹಚ್ಚಿದ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ರಿಷಕೇಶದಿಂದ ದೆಹಲಿಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ್ದಾನೆ. ರೈಲಿಗೆ ಬೆಂಕಿಹೊತ್ತಿಕೊಂಡು ಉರಿಯುತ್ತಿರುವದು ಮೊದಲಿಗೆ ಜನ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡಿದೆ ಎಂದು ಅಂದಾಜಿಸಿದ್ದರು ಎನ್ನಲಾಗಿದೆ. ನಂತರ ಪರಿಶೀಲಿಸಲಾಗಿ ಅದು ಓರ್ವ ವ್ಯಕ್ತಿ ಸಿಟ್ಟಿನಿಂದ ನಡೆಸಿದ ಕೃತ್ಯ ಎಂಬುದು ತಿಳಿದು ಬಂದಿದೆ.
ಸೆ. 6 ರಂದು ಚಂಡೀಗಢ ಕೂಚುವೇಳಿ ಎಕ್ಸ್ ಪ್ರೆಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ ವ್ಯಕ್ತಿಯೋರ್ವ ರೈಲಿಗೆ ಬೆಂಕಿ ಹಚ್ಚಿರುವದು ತಿಳಿದು ಬಂದಿದೆ ಎನ್ನಲಾಗಿದೆ.