ಸಮಾಜ ಅಭಿವೃದ್ಧಿಗೆ ಸಂಘಟಿತ ಹೋರಾಟ ಅಗತ್ಯಃ ವಿಠ್ಠಲ್ ಯಾದವ್
ಶ್ರೀಕೃಷ್ಣ ಯಾದವ ಗೊಲ್ಲ ಯುವ ಮಹಾಸಭಾ ಉದ್ಘಾಟನೆ
ಯಾದಗಿರಿಃ ಯಾದವ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ಸಂಘಟಿತ ಹೋರಾಟದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವೆಂದು ಅಪೇಕ್ಸ್ ಬ್ಯಾಂಕ್ ನಿರ್ದೇಶಕ ವಿಠ್ಠಲ್ ಯಾದವ ಹೇಳಿದರು.
ಜಿಲ್ಲೆಯ ಶಹಾಪುರ ತಾಲೂಕಿನ ಹೋತಪೇಟ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಯಾದವ ಗೊಲ್ಲ ಯುವ ಮಹಾಸಭಾ ನೂತನ ಸಂಘ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದ ಬಂಧುಗಳು ಮುಖ್ಯ ವಾಹಿನಿಗೆ ಬರಬೇಕಾದರೆ ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು. ಯಾವುದೇ ಸರ್ಕಾರದ ಯೋಜನೆಗಳು ಹಾಗೂ ಸಾಲ ಸೌಲಭ್ಯಗಳು ನಮಗೆ ದೊರಕಬೇಕಾದರೆ ಸಂಘಟಿತರಾಗಿ ಹೋರಾಟ ಮಾಡಬೇಕು. ಅಂದಾಗ ಮಾತ್ರ ಸಮಾಜದವರಿಗೆ ಸೌಲಭ್ಯ ದೊರಕಲು ಸಾಧ್ಯವಿದೆ.
ಯಾದವ ಸಮಾಜ ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದ ಶೋಷಿತ ಸಮುದಾಯವಾಗಿದೆ. ಮುಂಬರುವ ದಿನಗಳಲ್ಲಿ ನಾವಲ್ಲೆರೂ ಒಗ್ಗಟ್ಟಾಗಿ ಸಮುದಾಯದ ಏಳ್ಗೆಗೆ ಶ್ರಮಿಸುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷ ಹೊನ್ನಪ್ಪ ಗೌಡ ಪಾಟೀಲ, ಪ್ರಥಮ ದರ್ಜೆ ಗುತ್ತೇದಾರ ವೆಂಕೋಬ ಯಾದವ ಮಂಗಳೂರು, ಗ್ರಾ.ಪಂ. ಅಧ್ಯಕ್ಷ ಸಾಹೇಬಗೌಡ ದಿಗ್ಗಿ, ಖಂಡಪ್ಪಗೌಡ ಕೆ.ಪಾಟೀಲ, ಅಮೃತಗೌಡ ಮಾಲಿ ಪಾಟೀಲ, ಅಂಬ್ರೇಶ ಗೌಡ ಪೋಲಿಸ್ ಪಾಟೀಲ, ಸಾಯಬಣ್ಣ ಪುರ್ಲೆ, ಅಂಬ್ರೇಶ ಯಾದವ, ಭೀಮಣ್ಣ ಯಾದವ ಹೋತಪೇಠ, ಹಣಮಂತ್ರಾಯ ಸೇಡಂ, ಮಲ್ಲಣ ಹೊಸ್ಮನಿ, ಧರ್ಮಣ್ಣ ಯಾದವ, ಭೀಮರಡ್ಡಿ ಮಂಟೋಳಿ, ಸತೀಶ ಯಾದವ, ಸನ್ನಿ ಯಾದವ ಉಪಸ್ಥಿತರಿದ್ದರು.
ಯಾದವ ಯುವ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರದೀಪ ಪುರ್ಲೆ ಅಧ್ಯಕ್ಷತೆವಹಿಸಿದ್ದರು. ಧೂಳಪ್ಪ ಮುತ್ಯಾ ಮಾವನೂರು ಸಾನ್ನಿಧ್ಯವಹಿಸಿದ್ದರು. ಶಿಕ್ಷಕ ಲಕ್ಷ್ಮಣ ಲಾಳಸೇರಿ ಉಪನ್ಯಾಸ ನೀಡಿದರು. ಮಾಳಪ್ಪ ಯಾದವ ನಿರೂಪಿಸಿ. ವಂದಿಸಿದರು.