ಪ್ರಮುಖ ಸುದ್ದಿ
ಕಾರಿನ ಮೇಲೆ ಅರೆನಗ್ನವಾಗಿ ಕುಳಿತು ಮೆರವಣಿಗೆ : ಇದೆಂಥಾ ವಿಕೃತಿ!
ಬೆಂಗಳೂರು : ನಗರದ ಯಶವಂತಪುರ ವ್ಯಾಪ್ತಿಯಲ್ಲಿ ಕೆಲವು ಪುಂಡರು ಅರೆನಗ್ನವಾಗಿ ಕಾರಿನ ಮೇಲೆ ಕುಳಿತು ಮೆರವಣಿಗೆ ನಡೆಸಿದ ವಿಲಕ್ಷಣ ಘಟನೆ ನಡೆದಿದೆ. ತಡರಾತ್ರಿಯಲ್ಲಿ ಪುಂಡರ ಗುಂಪೊಂದು ಕುಡಿದ ಅಮಲಿನಲ್ಲಿ ಅರೆನಗ್ನವಾಗಿ ಕಾರಿನ ಟಾಪ್ ಮೇಲೆ ಕುಳಿತು ಹೊರಟಿದ್ದಾರೆ. ದಾರಿ ಹೋಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ತಿಳಿದು ಬಂದಿದೆ.
ನಡುರಸ್ತೆಯಲ್ಲಿ ಪುಂಡರ ಹಾವಳಿ ಕಂಡು ಯಶವಂತಪುರದ ಜನ ಬೆಚ್ಚಿಬಿದ್ದಿದ್ದಾರೆ. ಕೆಲವರು ತಮ್ಮ ಮೊಬೈಲ್ ಗಳಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದೀಗ ಪುಂಡರ ಪುಂಡಾಟ ಕುರಿತ ವಿಡಿಯೋ ವೈರಲ್ ಆಗಿದೆ. ಹೀಗಾಗಿ, ಯಶವಂತಪುರ ಠಾಣೆಯ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂಬುದು ನಾಗರಿಕರ ಆಗ್ರಹವಾಗಿದೆ.