ಗೋಹತ್ಯೆ ನಿಷೇಧಃ ನೀತಿ ಸಂಹಿತೆ ಉಲ್ಲಂಘನೆ ಕಾಂಗ್ರೆಸ್ ದೂರು ನೀಡಲು ಸಿದ್ಧತೆ
ಗೋಹತ್ಯೆ ನಿಷೇಧಃ ನೀತಿ ಸಂಹಿತೆ ಉಲ್ಲಂಘನೆ ಕಾಂಗ್ರೆಸ್ ದೂರು ನೀಡಲು ಸಿದ್ಧತೆ
ಬೆಂಗಳೂರಃ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿವೆ ಈ ಸಂದರ್ಭದಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆ ಮಾಡಿರುವದು ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ ಈ ಕುರಿತು ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಲಿದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ರಾಮಯ್ಯ ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆ ಸದನದಲ್ಲಿ ಮಂಡಿಸಿರುವದು ಸದ್ಯ ಗ್ರಾಮ ಪಂಚಾಯತ್ ಚುನಾವಣೆಗೆ ಮತಗಳನ್ನು ಸೆಳೆಯುವ ಹುನ್ನಾರ ನಡೆದಿದೆ. ಇದು ನೂರಕ್ಕೆ ನೂರರಷ್ಟು ಸಂಹಿತೆ ಉಲ್ಲಂಘನೆಯಾಗುತ್ತದೆ.
ಈ ಕುರಿತು ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುವದು ಎಂದ ಅವರು, ಉತ್ತರ ಪ್ರದೇಶದಲ್ಲಿ ಈ ಮಸೂದೆ ಮಂಡನೆಯಾದ ಮೇಲೆ ಹಸು ಸಾಕಾಣಿಕೆ ಕಡಿಮೆಯಾಗಿದೆ. ಇದರಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋಹತ್ಯೆ ನಿಷೇಧ ಮಸೂದೆ ಜಾರಿಯಿಂದ ಸಮರ್ಪಕವಾಗಿ ಕಟ್ಟುನಿಟ್ಟಾಗಿ ಕಾನೂನು ಪಾಲನೆ ಮಾಡಿದಲ್ಲಿ ಕಟುಕರ ಪಾಲಾಗುವ ಹಸುಗಳು ಮತ್ತು ಕರುಗಳ ಜೀವ ಉಳಿಯಲಿದೆ. ಸಾಕಿ ಸಲುಹಿದ, ಅಲ್ಲದೆ ಗೋಮಾತೆ, ಎತ್ತುಗಳಿಂದ ಸಾಕಷ್ಟು ಲಾಭ ಪಡೆದುಕೊಂಡು ಆರೋಗ್ಯ ಮತ್ತು ಆರ್ಥಿಕವಾಗಿ ಸಬಲರಾಗಿ ನಮ್ಮ ಹೊಟ್ಟೆ ತುಂಬಿಸಿ ಬೆಳೆಸಿದ ತಾಯಿ ಹೃದಯದ ಹಸುಗಳನ್ನೆ ಕತ್ತರಿಸುವದು ಸರಿಯಲ್ಲ ಎಂದು ರೈತಾಪಿ ಜನರು ಈ ಮಸೂದೆಯನ್ನು ಸ್ವಾಗತಿಸಿದ್ದಾರೆ.
ಬಹುತೇಕ ಹಳ್ಳಿಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ್ದರಿಂದ ಸ್ವಾಗತ ಮಾಡಿದ್ದಾರೆ ಎಂದು ವಿವಿಧ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.