ಪ್ರಮುಖ ಸುದ್ದಿ
ರಾತ್ರಿ ಸುರಿದ ಭಾರಿ ಮಳೆಗೆ ಮಲ್ಹಾರ ಗ್ರಾಮ ತತ್ತರ
ಯಾದಗಿರಿಃ ರಾತ್ರಿ ಸುರಿದ ಮಳೆಗೆ ಮಲ್ಹಾರ ಗ್ರಾಮಸ್ಥರು ಕಂಗಾಲು
ಯಾದಗಿರಿಃ ತಾಲೂಕಿನಲ್ಲಿ ನಿನ್ನೆ ರಾತ್ರಿ ಭಾರಿ ಮಳೆ ಸುರಿದ ಪರಿಣಾಮ ಮಲ್ಹಾರ ಗ್ರಾಮದ ಮನೆಗಳಿಗೆ ನೀರು ನುಗ್ಗಿದ್ದು, ನೀರನ್ನು ಹೊರ ಚಲ್ಲಲು ಗ್ರಾಮಸ್ಥರು ಪರದಾಡುವಂತಾಗಿದೆ.
ಗ್ರಾಮದ ತಗ್ಗು ಪ್ರದೇಶವೆಲ್ಲ ಜಲಾವೃತವಾಗಿದ್ದು, ಸಂಚಾರಕ್ಕೆ ಅಡೆತಡೆಯುಂಟಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ರಾತ್ರಿ ಭಾರಿ ಮಳೆ ಸುರಿದ ಪರಿಣಾಮ ಜನರು ರಾತ್ರಿಪುರ ಜಾಗರಣೆ ಮಾಡಿದ್ದಾರೆ. ಮನೆಗೆ ನೀರು ನುಗ್ಗಿರುವದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ.




