Homeಅಂಕಣಕ್ಯಾಂಪಸ್ ಕಲರವಜನಮನಪ್ರಮುಖ ಸುದ್ದಿಮಹಿಳಾ ವಾಣಿ

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

(KSSFCL) ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ?, ಅರ್ಹತೆ ಏನಿರಬೇಕು? ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆಯ ವಿವರ:

ಸನ್ನದು ಲೆಕ್ಕಪರಿಶೋಧಕರು
ಕಾನೂನು ಅಧಿಕಾರಿ (ಅಧಿಕಾರಿ ಶ್ರೇಣಿ)
ಮಾನವ ಸಂಪನ್ಮೂಲ ಅಧಿಕಾರಿ (ಅಧಿಕಾರಿ ಶ್ರೇಣಿ)
ತರಬೇತಿ ಅಧಿಕಾರಿ (ಅಧಿಕಾರಿ ಶ್ರೇಣಿ)
ಸೌಹಾರ್ದ ಅಭಿವೃದ್ಧಿ ಅಧಿಕಾರಿ (ಕಿರಿಯ ಅಧಿಕಾರಿ ಶ್ರೇಣಿ)
ಸಹಾಯಕರು
ಟೈಪಿಸ್ಟ್ ಕಮ್ ಸ್ಟೆನೊ (ಸಹಾಯಕ ಶ್ರೇಣಿ)
ಕಿರಿಯ ಸಹಾಯಕರು
ಉಪಸಿಬ್ಬಂದಿ ಕಮ್ ವಾಹನ ಚಾಲಕ

ಹುದ್ದೆಯ ಸಂಖ್ಯೆ:

ಸನ್ನದು ಲೆಕ್ಕಪರಿಶೋಧಕರು: 1
ಕಾನೂನು ಅಧಿಕಾರಿ (ಅಧಿಕಾರಿ ಶ್ರೇಣಿ): 2
ಮಾನವ ಸಂಪನ್ಮೂಲ ಅಧಿಕಾರಿ (ಅಧಿಕಾರಿ ಶ್ರೇಣಿ): 1
ತರಬೇತಿ ಅಧಿಕಾರಿ (ಅಧಿಕಾರಿ ಶ್ರೇಣಿ): ೧
ಸೌಹಾರ್ದ ಅಭಿವೃದ್ಧಿ ಅಧಿಕಾರಿ (ಕಿರಿಯ ಅಧಿಕಾರಿ ಶ್ರೇಣಿ): 11
ಸಹಾಯಕರು: 8
ಟೈಪಿಸ್ಟ್ ಕಮ್ ಸ್ಟೆನೊ (ಸಹಾಯಕ ಶ್ರೇಣಿ): 2
ಕಿರಿಯ ಸಹಾಯಕರು: 11
ಉಪಸಿಬ್ಬಂದಿ ಕಮ್ ವಾಹನ ಚಾಲಕ: 2

ಒಟ್ಟು ಹುದ್ದೆಯ ಸಂಖ್ಯೆ:
39

ವಿದ್ಯಾರ್ಹತೆ ಹಾಗೂ ವಯೋಮಿತಿ:

ಸನ್ನದು ಲೆಕ್ಕಪರಿಶೋಧಕರು: ಸಿಎ/ ಸಿಎಸ್ /ICWA. ಅನುಭವ ಹೊಂದಿರುವವರಿಗೆ ಆದ್ಯತೆ, ಗರಿಷ್ಠ 35 ವರ್ಷ ಮೀರಿರಬಾರದು.
ಕಾನೂನು ಅಧಿಕಾರಿ (ಅಧಿಕಾರಿ ಶ್ರೇಣಿ): ಕಾನೂನು ಪದವಿ ಜೊತೆಗೆ ಕಂಪ್ಯೂಟರ್ ಪರಿಣಿತಿ ಕಡ್ಡಾಯ, ಗರಿಷ್ಠ 35 ವರ್ಷ ಮೀರಿರಬಾರದು.
ಮಾನವ ಸಂಪನ್ಮೂಲ ಅಧಿಕಾರಿ (ಅಧಿಕಾರಿ ಶ್ರೇಣಿ): ಎಂಬಿಎ, ಹೆಚ್.ಆರ್ ಪದವಿ. ಕಾರ್ಪೋರೇಟ್ ಕಂಪನಿ ಅಥವಾ ಹೆಚ್‌ಆರ್ ಕ್ಷೇತ್ರದಲ್ಲಿ ಕಾರ್ಯಾನುಭವ ಪಡೆದಿರಬೇಕು, ಗರಿಷ್ಠ 35 ವರ್ಷ ಮೀರಿರಬಾರದು.
ತರಬೇತಿ ಅಧಿಕಾರಿ (ಅಧಿಕಾರಿ ಶ್ರೇಣಿ): ಎಂಎ ಕನ್ನಡ ಅಥವಾ MSW ಪದವಿ, 3 ವರ್ಷ ಕನಿಷ್ಠ ಕಾರ್ಯಾನುಭವ, ಗರಿಷ್ಠ 35 ವರ್ಷ ಮೀರಿರಬಾರದು.
ಸೌಹಾರ್ದ ಅಭಿವೃದ್ಧಿ ಅಧಿಕಾರಿ (ಕಿರಿಯ ಅಧಿಕಾರಿ ಶ್ರೇಣಿ): ಯಾವುದೇ ಪದವಿ ಪಾಸ್, ಬ್ಯಾಂಕಿಂಗ್ ಅಥವಾ ಸಹಕಾರ ಕ್ಷೇತ್ರದಲ್ಲಿ ಕೆಲಸ ಅನುಭವ ಹೊಂದಿದವರಿಗೆ ಆದ್ಯತೆ, ಗರಿಷ್ಠ 30 ವರ್ಷ ವಯಸ್ಸು ದಾಟಿರಬಾರದು.
ಸಹಾಯಕರು: ಯಾವುದೇ ಪದವಿ ಪಾಸ್. ಬಿಕಾಂ / ಬಿಬಿಎ ಪಾಸ್ ಮಾಡಿರುವವರಿಗೆ ಆದ್ಯತೆ ನೀಡಲಾಗುವುದು, ಕಂಪ್ಯೂಟರ್ ಪರಿಣತಿ ಕಡ್ಡಾಯ, ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ಟೈಪಿಸ್ಟ್ ಕಮ್ ಸ್ಟೆನೊ (ಸಹಾಯಕ ಶ್ರೇಣಿ): ಯಾವುದೇ ಪದವಿ ಪಾಸ್, ಶೀಘ್ರ ಲಿಪಿಯನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರೌಢದರ್ಜೆಯಲ್ಲಿ ತೇರ್ಗಡೆ ಆಗಿರಬೇಕು. ಅಥವಾ ಬೆಳರಚ್ಚಿನಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರೌಢದರ್ಜೆಯಲ್ಲಿ ಪಾಸಾಗಿದ್ದು, ಪ್ರಮಾಣಪತ್ರ ಪಡೆದಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ಕಿರಿಯ ಸಹಾಯಕರು: ಪಿಯುಸಿ ತೇರ್ಗಡೆ ಜೊತೆಗೆ ಕಂಪ್ಯೂಟರ್ ಪರಿಣತಿ ಕಡ್ಡಾಯ. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ಉಪಸಿಬ್ಬಂದಿ ಕಮ್ ವಾಹನ ಚಾಲಕ: ಎಸ್‌ಎಸ್‌ಎಲ್‌ಸಿ ಪಾಸ್ ಜೊತೆಗೆ ಡಿಎಲ್ ಹೊಂದಿರಬೇಕು. ಲಘುವಾಹನ ಚಾಲಕರಾಗಿ ಮೂರು ವರ್ಷ ಅನುಭವ ಇರಬೇಕು. 30 ವರ್ಷ ವಯಸ್ಸು ಮೀರಿರಬಾರದು.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
09-09-2024 ರ ಸಂಜೆ 05-30 ಗಂಟೆಯೊಳಗೆ.

(KSSFCL) ಅರ್ಜಿ ಸಲ್ಲಿಕೆ ಹೇಗೆ?;
www.souharda.coop ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಂಡು ಈ ಕೆಳಗಿನ ವಿಳಾಸಕ್ಕೆ ಕಳುಹಿಸುವುದು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ,
ಸೌಹಾರ್ಧ ಸಹಕಾರಿ ಸೌಧ,
ನಂ 68, ಒಂದನೇ ಮಹಡಿ,
17 & 18ನೇ ಅಡ್ಡರಸ್ತೆ ಮಧ್ಯೆ,
ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ, ಬೆಂಗಳೂರು -560055

ಅರ್ಜಿ ಶುಲ್ಕ:
1- 5 ವರೆಗಿನ ಹುದ್ದೆಗಳಿಗೆ ಅರ್ಜಿ ಶುಲ್ಕ ರೂ.500
ನಂತರದ 4 ಹುದ್ದೆಗಳಿಗೆ ಅರ್ಜಿ ಶುಲ್ಕ ರೂ.300

ವೇತನ:

ಸನ್ನದು ಲೆಕ್ಕಪರಿಶೋಧಕರು: 60,000- 70,000
ಕಾನೂನು ಅಧಿಕಾರಿ (ಅಧಿಕಾರಿ ಶ್ರೇಣಿ) : 35,000- 38,000
ಮಾನವ ಸಂಪನ್ಮೂಲ ಅಧಿಕಾರಿ (ಎಂಬಿಎ, ಹೆಚ್.ಆರ್ ) (ಅಧಿಕಾರಿ ಶ್ರೇಣಿ) 35,000-38,000
ತರಬೇತಿ ಅಧಿಕಾರಿ (ಅಧಿಕಾರಿ ಶ್ರೇಣಿ): 35,000-38,000
ಸೌಹಾರ್ದ ಅಭಿವೃದ್ಧಿ ಅಧಿಕಾರಿ (ಕಿರಿಯ ಅಧಿಕಾರಿ ಶ್ರೇಣಿ): 28,000- 30,000
ಸಹಾಯಕರು: 20,000- 22,000
ಟೈಪಿಸ್ಟ್ ಕಮ್ ಸ್ಟೆನೊ (ಸಹಾಯಕ ಶ್ರೇಣಿ): 20,000- 22,000
ಕಿರಿಯ ಸಹಾಯಕರು: 13,000- 15,000
ಉಪಸಿಬ್ಬಂದಿ ಕಮ್ ವಾಹನ ಚಾಲಕ: 13,000- 15,000

ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

(KSSFCL) ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ : 080-23378375
ಇ-ಮೇಲ್ ವಿಳಾಸ : souharda@souharda.coop

 

 

Related Articles

Leave a Reply

Your email address will not be published. Required fields are marked *

Back to top button