ನಾಡಿನ ಜಲ, ನೆಲ ರಕ್ಷಣೆಗೆ ಸದಾ ಸಿದ್ಧರಿರಲು ಹನುಮೇಶ ಉಪ್ಪಾರ ಕರೆ
ನಮ್ಮ ಕರವೇ ಜಿಲ್ಲಾಧ್ಯಕ್ಷರಾಗಿ ಮಂಜುನಾಥ ಚಟ್ಟಿ ಆಯ್ಕೆ
ಯಾದಗಿರಿಃ ನಾಡಿನ ನೆಲ, ಜಲ ರಕ್ಷಣೆ ಮತ್ತು ಕನ್ನಡ ನಾಡಿಗೆ ಅನ್ಯಾಯವಾದಾಗ ಕನ್ನಡಿಗರಾದ ನಾವುಗಳು ಸಂರಕ್ಷಣೆಗೆ ಸದಾ ಸಿದ್ಧರಿರಬೇಕು ಎಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಯುವ ಸೇನೆ ರಾಜ್ಯಧ್ಯಕ್ಷ ಹನುಮೇಶ ಉಪ್ಪಾರ ಹೇಳಿದರು.
ನಮ್ಮ ಕರವೇ ಸಂಘಟನಾತ್ಮಕವಾಗಿ ರಾಜ್ಯ ಸುತ್ತುತ್ತಿರುವ ಸಂಘಟನೆಯ ಪ್ರಮುಖ ತಂಡ ಜಿಲ್ಲೆಯ ಶಹಾಪುರ ನಗರಕ್ಕೆ ಆಗಮಿಸಿದಾಗ ಸಂಘಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕಾಗಿ ಸಮರ್ಪಕ ಹೋರಾಟ ರೂಪಿಸಿ ನಾಗರಿಕರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡಬೇಕು. ಹಲವಾರು ಇಲಾಖೆವರು ಜಾರಿಯಲ್ಲಿರುವ ಯೋಜನೆಗಳು ಸಮರ್ಪಕವಾಗಿ ಜಾರಿಯಲ್ಲಿವೆಯೇ ಎಂಬುದನ್ನು ಮಾಹಿತಿ ಪಡೆಯಬೇಕು. ಯೋಜನೆಗಳಲ್ಲಿ ಅಕ್ರಮ ಕಂಡು ಬಂದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸುವ ಮೂಲಕ ಜನಸಾಮಾನ್ಯರಿಗೆ ಯೋಜನೆಗಳ ಲಾಭ ಪಡೆಯುವಂತೆ ಮಾಡಬೇಕು ಎಂದು ವಿವಿಧ ರೂಪದ ಹೋರಾಟ ಕುರಿತು ತಿಳಿಸಿದರು.
ಇದೇ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ನಮ್ಮ ಕರವೇ ಯುವ ಸೇನೆಯ ಜಿಲ್ಲಾಧ್ಯಕ್ಷರನ್ನಾಗಿ ಯುವ ಮುಖಂಡ ಮಂಜುನಾಥ ಚಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ರಾಜ್ಯಧ್ಯಕ್ಷರು ನೂತನ ಯುವ ಸೇನೆ ಅಧ್ಯಕ್ಷರನ್ನು ಸನ್ಮಾನಿಸಿ ನೇಮಕ ಪತ್ರ ನೀಡಿದರು. ಈ ಸಂದರ್ಭದಲ್ಲಿ ವೇದಿಕೆಯ ಕಾರ್ಯಧ್ಯಕ್ಷ ಮಹ್ಮದ್ ಮುಸ್ತಫಾ ಅಲಿ, ಬೆಂಗಳೂರ ನಗರ ಉಫಾಧ್ಯಕ್ಷ ಜಬಿಉಲ್ಲಾಖಾನ್, ಇಲಿಯಾಸ್ ಪಾಶ ಸೇರಿದಂತೆ ರಾಮು ತಹಸೀಲ್, ಶಿವಶರಣ ತಳವಾರ, ಆಜೀಮ್ ಹಳಿಸಗರ, ಕಾಶಿನಾಥ ರಟ್ನಡಗಿ, ಶಾರು ಮದೀನಾ, ಭೀಮು ಬಿಲ್ಲವ್, ಅಯ್ಯಪ್ಪ ಹಯ್ಯಾಳಕರ್, ನಿಂಗಪ್ಪ ಹಳಿಸಗರ, ಭೀಮಶಂಕರ ಕಟ್ಟಿಮನಿ ಸೇರಿದಂತೆ ಇತರರಿದ್ದರು.