ಪ್ರಮುಖ ಸುದ್ದಿ
ಯಾದಗಿರಿ 25, ಶಹಾಪುರ ನಗರದಲ್ಲಿ 11, ಸುರಪುರ 28 ಮಂದಿಗೆ ಕೊರೊನಾ ದೃಢ
ಶಹಾಪುರ ನಗರದಲ್ಲಿ 11, ಸುರಪುರ 28 ಮಂದಿಗೆ ಕೊರೊನಾ
ಯಾದಗಿರಿಃ ಜಿಲ್ಲೆಯಲ್ಲಿ ಇಂದು ಜುಲೈ 27 ರಂದು ಮತ್ತೆ 64 ಮಂದಿಗೆ ಕೊರೊನಾ ದೃಢವಾಗಿದೆ.
ಅದರಲ್ಲಿ ಜಿಲ್ಲೆಯ ಶಹಾಪುರ ನಹರದಲ್ಲಿಯೇ 11 ಮಂದಿಗೆ ಕೊರೊನಾ ದೃಢವಾಗಿದೆ. ಸುರಪುರ ತಾಲೂಕಿನಲ್ಲಿ 28 ಮಂದಿಗೆ ಕೊರೊನಾ ದೃಢವಾಗಿದೆ. ಉಳಿದ 25 ಜನರಿಗೆ ಯಾದಗಿರಿ ತಾಲೂಕಿನ ಮಂದಿಗೆ ಕೊರೊನಾ ತಗುಲಿದೆ.
ನಿನ್ನೆ ಶಹಾಪುರ ನಗರದ ಗಾಂಧಿಚೌಕ್, ಲಕ್ಷ್ಮೀನಗರ ನಿವಾಸಿಗಳಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ಇಂದು ನಗರದ ಆಶ್ರಯ ಕಾಲೊನಿ-2, ಹಳಿಪೇಟೆ -4 ಮತ್ತು ಮುಸ್ತಫಾ ಕಾಲೊನಿ -1 ಸೇರಿದಂತೆ ಮತ್ತೆ ವಿದ್ಯಾನಗರದಲ್ಲಿ -4 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ನಗರದ ಜನತೆ ಕೊರೊನಾ ಬಗ್ಗೆ ಉದಾಸೀನತೆ ತಾಳದೆ ಸರ್ಕಾರ ಸೂಚಿಸಿದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ದಿನ ಕಳೆದಂತೆ ಕೊರೊನಾ ಮಹಾಮಾರಿ ತೀವ್ರತೆ ಹೆಚ್ವಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.