ಬೆಂಗಳೂರಿಗೆ ಕಾಲಿಟ್ಟ ಹೊಸ ರೂಪಾಂತರ ಕೊರೊನಾ.?
ಬೆಂಗಳೂರಃ ಡಿಸೆಂಬರ್ 19ರಂದು ಲಂಡನ್ ನಿಂದ ನಗರಕ್ಕೆ ವಾಪಾಸ್ ಆಗಿದ್ದಂತ ತಾಯಿ-ಮಗಳಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.
ಹೀಗಾಗಿ ಹೆಚ್ಚಿನ ಪರೀಕ್ಷೆಗಾಗಿ ಸ್ವ್ಯಾಬ್ ಸಂಗ್ರಹಿಸಿರುವಂತ ಆರೋಗ್ಯ ಸಿಬ್ಬಂದಿಗಳು, ಪರೀಕ್ಷೆಗಾಗಿ ಪುಣೆಗೆ ಕಳುಹಿಸಿದ್ದಾರೆ. ಈ ಮೂಲಕ ಕರ್ನಾಟಕಕ್ಕೂ ಯುಕೆ ಹೊಸ ಕೊರೋನಾ ವೈರಸ್ ಕಾಲಿಟ್ಟಿದೆ ಎನ್ನಲಾಗುತ್ತಿದೆ.
ಬೆಂಗಳೂರಿನ ವಸಂತಪುರದ ವಿಠಲನಗರದ ನಿವಾಸಿಗಳು ಡಿಸೆಂಬರ್ 19ರಂದು ಲಂಡನ್ ನಿಂದ ನಗರಕ್ಕೆ 6 ವರ್ಷದ ಬಾಲಕಿ ಹಾಗೂ 35 ವರ್ಷದ ಆಕೆಯ ತಾಯಿ ವಾಪಾಸ್ ಆಗಿದ್ದರು.
ಅವರನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರ ವರದಿ ಬಂದಿದ್ದು, ಅವರಿಬ್ಬರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.
ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟ ಹಿನ್ನಲೆಯಲ್ಲಿ ಅವರ ಸ್ವ್ಯಾಬ್ ಸಂಗ್ರಹಿಸಿರುವಂತ ಆರೋಗ್ಯ ಸಿಬ್ಬಂದಿಗಳು, ಯುಕೆ ಹೊಸ ಮಾದರಿಯ ಕೊರೋನಾ ಸೋಂಕು ಅವರಿಗೆ ತಗುಲಿದ್ಯಾ ಎನ್ನುವ ಬಗ್ಗೆ ಹೆಚ್ಚಿನ ಪರೀಕ್ಷೆಗಾಗಿ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಹೀಗಾಗಿ ನಾಗರಿಕರಲ್ಲಿ ಕರ್ನಾಟಕಕ್ಕೂ ಹೊಸ ರೂಪಾಂತರ ಮಹಾಮಾರಿ ಕಾಲಿಟ್ಟಿದೆ ಎಂಬ ಆತಂಕ ಶುರುವಾಗಿದೆ. ಪಕ್ಷದ ತಮಿಳುನಾಡಿಗೆ ಈಗಾಗಲೇ ಹೊಸ ಕೊರೊನಾ ಪತ್ತೆಯಾದ ವರದಿಯಾಗಿದೆ. ಇದು ಇನ್ನಷ್ಟು ಆತಂಕಕ್ಕೆ ಎಡೆ ಮಾಡಿದೆ ಎನ್ನಲಾಗಿದೆ.