ಪ್ರಮುಖ ಸುದ್ದಿ
ದೇಶದ ಕೊರೊನಾ ವೈರಸ್ VACCINE ಲೋಕಾರ್ಪಣೆ ಸಾಧ್ಯತೆ.?
vv desk-ಜಗತ್ತನ್ನು ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಔಷಧ ಕಂಡು ಹಿಡಿದಿರುವ ಭಾರತ ಆಗಸ್ಟ್ 15 ರಂದು ಲೋಕಾರ್ಪಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ದೇಶದಲ್ಲಿ ಮೊದಲ ಬಾರಿ ಕಂಡು ಹಿಡಿದಿರುವ ಸೋಂಕು ನಿರೋಧಕ ಔಷಧ ಮನುಷ್ಯರ ಮೇಲಿನ ಪ್ರಯೋಗಗಳು ಯಶಸ್ಸು ಕಾಣುತ್ತಿದ್ದು, ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಅಂತಿಮ ವರದಿ ಕೈ ಸೇರಿದ ಕೂಡಲೇ ಬಿಡುಗಡೆ ಮಾಡಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಸಂಸ್ಥೆ ಜೊತೆಗೂಡಿ ಕೆಲಸ ಮಾಡುತ್ತಿರುವ ಭಾರತ ಕೌನ್ಸಿಲ್ ಆಫ್ ಮೆಡಿಸಿನ್ ರಿಸರ್ಚ್ ಸಂಸ್ಥೆ 12 ವಿವಿಧ ಕಂಪನಿಗಳ ಔಷಧಗಳ ಪ್ರಯೋಗದಲ್ಲಿ ತೊಡಗಿದೆ.
ದೇಶದಲ್ಲಿ ಕಂಡು ಹಿಡಿಯಲಾಗುತ್ತಿರುವ ಔಷಧಗಳನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಲೋಕಾರ್ಪಣೆ
ಮನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.