ಬಡ ಸ್ಲಂ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿದ ಕಾನ್ಸ್ಟೇಬಲ್
ದಿನಕ್ಕೊಂದು ಕಥೆ
ತನ್ನ ಪೊಲೀಸ್ ಸ್ಟೇಷನ್ ಬಳಿ 1200 ಬಡ ಸ್ಲಮ್ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿರುವ ಪೊಲೀಸ್ ಕಾನ್ಸ್ಟೇಬಲ್.
ಭವಿಷ್ಯದ ಪೀಳಿಗೆಗೆ ಉತ್ತಮವನ್ನಾಗಿ ಮಾಡಲು ಶಿಕ್ಷಣವು ಅತ್ಯುತ್ತಮ ಮಾರ್ಗವಾಗಿದೆ. 42 ವರ್ಷದ ಕಾನ್ಸ್ಟೇಬಲ್, ಸಂಜಯ್ ರಾಥೋಡ್ ಅದನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ.
ಸಂಜಯ್ ಕೇವಲು ಅದನ್ನು ತಿಳಿದುಕೊಂಡು ಸುಮ್ಮನಿಲ್ಲ ಬದಲಾಗಿ ಇಂದೋರ್ ಛತ್ರಿಪುರಾ ಪೊಲೀಸ್ ಠಾಣೆಗೆ ಸಮೀಪದಲ್ಲಿರುವ ಸ್ಲಂ ಮಕ್ಕಳಿಗೆ
ತನ್ನ ಪೊಲೀಸ್ ಸ್ಟೇಷನ್ ಬಳಿ ತಮ್ಮ ಹಿರಿಯ ಅಧಿಕಾರಿಗಳ ಅನುಮತಿಯ ಮೇರೆಗೆ ಪಾಠ ಹೇಳಿಕೊಡುವುದರ ಮೂಲಕ ಪೊಲೀಸರಿಗೂ ಮಾನವೀಯತೆ ಇರುತ್ತದೆ ಎಂದು ನಿರೂಪಿಸಿದ್ದಾನೆ.
ರಾಥೋಡ್ 2003 ರಿಂದ ಬಡ ಮಕ್ಕಳಿಗೆ ಪಾಠಮಾಡಿಕೊಂಡು ಬಂದಿದ್ದಾನೆ..2003 ರಲ್ಲಿ ಸ್ಥಳೀಯ ಸಂಸ್ಥೆಯ ಸಹಾಯದಿಂದ ಬಡ ಸ್ಲಾಮ್ ಮಕ್ಕಳಿಗೆ ಪಾಠಮಾಡಲು ಯೋಜನೆ ಹಾಕಿಕೊಂಡು ಬರುತ್ತಿದ್ದ ರಾಥೋಡ್ ಮಕ್ಕಳಿಗೆ ಒಂದು ನಯ ಪೈಸೆಯನ್ನು ಪಡೆಯದೇ ಉಚಿತವಾಗಿ ಶಿಕ್ಷಣವನ್ನು ನೀಡುತ್ತಿದ್ದರು.
ಹೀಗಿರುವಾಗ ಸ್ವಲ್ಪ ಸಮಯದ ನಂತರ NGO ನಿಧಿಯನ್ನು ಒದಗಿಸುವುದನ್ನು ನಿಲ್ಲಿಸಿತು.. ಆದರೂ ಆದರೆ, ರಾಥೋಡ್ ತನ್ನ ಪೋಲಿಸ್ ಸ್ಟೇಷನ್ ಬಳಿ ಸ್ಲಂ ಮಕ್ಕಳನ್ನು ಕಲಿಸುವ ಅಭ್ಯಾಸವನ್ನು ಮುಂದುವರಿಸಿದರು.
ರಾಥೋಡ್ ಚಟ್ರಿಪುರಾ ಪೊಲೀಸ್ ಠಾಣೆಯ ಬಳಿ ಸಣ್ಣ ಕೋಚಿಂಗ್ ಸೆಂಟರ್ ಪ್ರಾರಂಭಿಸಿದರು ಮತ್ತು ಅದಕ್ಕೆ “ಸಂಜೀವಿನಿ ಬಾಲ್ ಮಿತ್ರ ಕೇಂದ್ರ” ಎಂದು ಹೆಸರಿಟ್ಟರು. ಆರ್ಥಿಕವಾಗಿ ಹೈಡ್ ಉಳಿದಿರುವ ಪೋಷಕರು ತಮ್ಮ ಮಕ್ಕಳನ್ನು ರಾಥೋಡ್ ಅವರ ಕೋಚಿಂಗ್ ಸೆಂಟರ್ ಗೆ ಕಳುಹಿಸಲು ಆರಂಭಿಸಿದರು.
6 ವರ್ಷ ಮೇಲ್ಪಟ್ಟ ಶಾಲೆಗೆ ಹೋಗದ ಮಕ್ಕಳಿಗೆ ಮುಖ್ಯ ವಿಷಯಗಳನ್ನು ಬೋಧನೆ ಮಾಡುವುದರ ಜೊತೆಗೆ ಕಂಪ್ಯೂಟರ್ ತರಬೇತಿ, ಯೋಗ ವ್ಯಾಯಾಮ, ದೈಹಿಕ ಶಿಕ್ಷಣ, ಮುಂತಾದ ವಿಷಯಗಳನ್ನು ಕಲಿಸಲಾಗುತ್ತಿದೆ. ಆ ಸ್ಲಮ್ ಮಕ್ಕಳಲ್ಲಿ ಇದ್ದ ಕಲಿಯಬೇಕು ಎನ್ನುವ ಉತ್ಸಾಹ ಮಕ್ಕಳಿಗೆ ಚೆನ್ನಾಗಿ ಭೋದನೆ ಮಾಡಬೇಕು ಎಂದು ರಾಥೋಡ್ರನ್ನು ಪ್ರೇರೇಪಿಸುತಿತ್ತು.
ನಂತರ ಅವರು ತಮ್ಮ ಕೆಲಸದಲ್ಲಿ ಮಾಡಿದ್ದ ಸಂಪೂರ್ಣ ಉಳಿತಾಯವನ್ನು ಹೂಡಿಕೆ ಮಾಡಿ ಕೆಲವು ಶಿಕ್ಷಕರನ್ನು ಕೆಲಸಕ್ಕೆ ಸೇರಿಸಿಕೊಂಡು ಮಕ್ಕಳಿಗೆ ಸಂಜೆ ನಾಲ್ಕು ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ಪಾಠ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ.
ಅವರ ಬಾಲ್ ಮಿತ್ರ ಕೇಂದ್ರದಲ್ಲಿ ಅನಾಥ ಮಕ್ಕಳು, ಭಿಕ್ಷೆಬೇಡುವ ಮಕ್ಕಳು,ಬಡ ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ.. ಬಾಲ್ ಮಿತ್ರ ಕೇಂದ್ರದಲ್ಲಿ ಶಿಕ್ಷಣ ಪಡೆದ ಮಕ್ಕಳಿಗೆ ಮುಂದಿನ ವ್ಯಾಸಂಗಕ್ಕೆ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಸಹಾಯ ಮಾಡುತ್ತಾರೆ.
ಈ ಕಥೆಯು ಮಾನವೀಯತೆಯ ಅತ್ಯುತ್ತಮ ಉದಾಹರಣೆಯಾಗಿದೆ, ನಮ್ಮ ವ್ಯಾಪ್ತಿಯನ್ನು ನಾವು ವಿಸ್ತರಿಸಬೇಕಾಗಿದೆ ಅಷ್ಟೇ,, ಭಾರತದಲ್ಲಿ ಪ್ರತಿವರ್ಷ ಸುಮಾರು ಲಕ್ಷಕ್ಕಿಂತ ಹೆಚ್ಚು ಮಕ್ಕಳು ಪ್ರಾರ್ಥಮಿಕ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಈ ನಿಟ್ಟಿನಲ್ಲಿ ನಮ್ಮ ದೇಶವು ಇನ್ನೂ ಅನೇಕ ರಾಥೋಡ್ ಗಳ ಅಗತ್ಯವಿದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882