ವಿನಯ ವಿಶೇಷ

ರಾಶಿ ಭವಿಷ್ಯಃ ಹಿಂಜರಿಕೆ ಬಿಟ್ಟು ಮುನ್ನುಗ್ಗಿ ಸಫಲತೆ ಕಾಣಿ

ಶ್ರೀ ಸಿಗಂದೂರು ಚೌಡೇಶ್ವರಿ ಅಮ್ಮನವರ ಕೃಪಾಕಟಾಕ್ಷದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಭಾದ್ರಪದ ಮಾಸ
ನಕ್ಷತ್ರ : ಜೇಷ್ಠ
ಋತು : ವರ್ಷ
ರಾಹುಕಾಲ 10:49 – 12:21
ಗುಳಿಕ ಕಾಲ 07:45 – 09:17
ಸೂರ್ಯೋದಯ 06:12:51
ಸೂರ್ಯಾಸ್ತ 18:28:24
ತಿಥಿ : ಅಷ್ಟಮಿ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಕೆಲಸದಲ್ಲಿ ಪ್ರಾರಂಭಿಕ ಹಿನ್ನಡೆ ಆಗಬಹುದು ಆದರೆ ನಿಮ್ಮ ಛಲಬಿಡದ ಪ್ರಯತ್ನದಿಂದ ಗೆಲುವು ಸಿಗಲಿದೆ. ಆರ್ಥಿಕ ವ್ಯವಹಾರಗಳಲ್ಲಿ ವಿಳಂಬವಾಗುವ ಸಾಧ್ಯತೆ ಕಂಡುಬರುತ್ತದೆ. ಹೂಡಿಕೆಗಳಲ್ಲಿ ಆದಷ್ಟು ಜಾಗ್ರತೆ ಇರಲಿ. ಕುಟುಂಬ ಮತ್ತು ಕೆಲಸದಲ್ಲಿ ಮಾನಸಿಕ ಸಂಘರ್ಷದ ವಾತಾವರಣ ಕಾಣಬಹುದು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಪ್ರಯೋಗಗಳಲ್ಲಿ ನಿಶ್ಚಿತ ಗೆಲುವು ಸಾಧಿಸಲಿದ್ದೀರಿ. ಹಣ ಗಳಿಕೆ ವಿಷಯವು ತುಂಬಾ ಉತ್ಸಾಹಭರಿತವಾಗಿ ಹಾಗೂ ಅಂದುಕೊಂಡಂತೆ ಯಶಸ್ವಿ ಫಲಿತಾಂಶ ನೀಡಲಿದೆ. ಕುಟುಂಬದಿಂದ ಶುಭಸುದ್ದಿ ಕೇಳುವ ಸಾಧ್ಯತೆ ಕಾಣಬಹುದು. ಬಹುದಿನದ ಯೋಜನೆ ಈ ದಿನ ಅನಾಯಾಸವಾಗಿ ಪಡೆಯಲಿದ್ದೀರಿ. ಸಕಾಲದಲ್ಲಿ ಆರ್ಥಿಕ ಸಹಕಾರ ಸಿಗಲಿದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ಬುದ್ಧಿವಂತಿಕೆಯ ಪ್ರತಿಫಲವಾಗಿ ಉತ್ತಮ ಮಟ್ಟದ ಯೋಜನೆಗಳನ್ನು ಪಡೆದುಕೊಳ್ಳುವಿರಿ. ಆರ್ಥಿಕ ಪ್ರಗತಿ ಮಂದಗತಿಯಾಗಿ ನಡೆಯಲಿದೆ. ಸ್ನೇಹಿತರಿಂದ ಔತಣಕೂಟದ ಆಮಂತ್ರಣ ಬರಬಹುದು. ಸಂಗಾತಿಯೊಡನೆ ಪ್ರವಾಸದ ಚಿಂತನೆ ಮಾಡುವಿರಿ. ಅಧಿಕ ದುಂದು ವೆಚ್ಚಗಳಿಂದ ಹಾನಿಯಾಗಬಹುದು ಎಚ್ಚರವಿರಲಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಸಮಯದ ಮಹತ್ವವನ್ನು ಅರಿಯಲು ಪ್ರಯತ್ನಿಸಿ. ಕೊಟ್ಟಿರುವ ಕಾರ್ಯಗಳನ್ನು ಆದಷ್ಟು ಬೇಗ ಮಾಡಿ ಮುಗಿಸುವುದು ಒಳ್ಳೆಯದು. ಮೇಲಾಧಿಕಾರಿಗಳಿಂದ ನಿಮ್ಮ ನಡೆಗಳಿಗೆ ಅಸಮ್ಮತಿ ಸೂಚಿಸಲಾಗುತ್ತದೆ. ಕೆಲಸದ ವಿಚಾರವಾಗಿ ಇನ್ನೊಬ್ಬರನ್ನು ನಂಬಿ ಕೂರುವುದು ಬೇಡ. ಪ್ರಾಮಾಣಿಕ ಪ್ರಯತ್ನ ನಿಮ್ಮಿಂದಲೇ ನಡೆಯಲಿ. ನಿಮ್ಮ ಮರೆಗುಳಿತನ ದಿಂದ ಮುಖ್ಯವಾದ ಕೆಲಸನ್ನು ಮರೆತುಬಿಡಬಹುದು ಎಚ್ಚರವಿರಲಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಬಲಿಷ್ಟ ಆರ್ಥಿಕ ಯೋಜನೆಗಳನ್ನು ಪಡೆದುಕೊಳ್ಳಲು ತಯಾರಿ ನಡೆಸುವಿರಿ. ಬಂಧುವರ್ಗದ ವ್ಯಾಜ್ಯಗಳು ಸರಿಹೋಗಲಿದೆ. ಹಿರಿಯರು ನಿಮ್ಮ ಜೀವನ ಆಧಾರಕ್ಕಾಗಿ ಜವಾಬ್ದಾರಿಗಳು ಹಾಗೂ ಸವಲತ್ತುಗಳನ್ನು ನೀಡಲಿದ್ದಾರೆ. ಸ್ನೇಹಿತರಲ್ಲಿ ಮನಸ್ತಾಪ ತಲೆದೋರಬಹುದು. ಸಂಗಾತಿಯೊಡನೆ ಪ್ರೇಮದಿಂದ ಕಾಲಕಳೆಯಲು ಇಚ್ಚಿಸುವಿರಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕ್ರಿಯಾತ್ಮಕ ಕೆಲಸಗಳಿಂದ ಹೊಸ ಆರ್ಥಿಕ ಮಾರ್ಗಗಳನ್ನು ಹುಡುಕಿ ಕೊಳ್ಳುವಿರಿ. ಯಂತ್ರೋಪಕರಣ ಕಾಮಗಾರಿಗಳಲ್ಲಿ ಎಚ್ಚರಿಕೆ ಇರಲಿ. ಲಾಭಕರವಾದ ಪ್ರಯಾಣವನ್ನು ಬೆಳೆಸುವ ಸಾಧ್ಯತೆ ಕಂಡುಬರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಸಿಗುವುದು ನಿಶ್ಚಿತ. ಆರ್ಥಿಕ ವ್ಯವಹಾರಗಳನ್ನು ಆದಷ್ಟು ಪತ್ರದ ಮುಖಾಂತರ ಮಾಡುವುದು ಒಳಿತು. ಮಕ್ಕಳ ಬೆಳವಣಿಗೆ ಉತ್ತಮವಾಗಿರುತ್ತದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಆರೋಗ್ಯದಲ್ಲಿ ಅಗತ್ಯ ಮುತುವರ್ಜಿವಹಿಸಿ. ಕೆಲಸಗಳಲ್ಲಿ ಶ್ರದ್ದೆ ಮತ್ತು ಪ್ರಾಮಾಣಿಕತೆ ಮುಖ್ಯವಾಗಿರುತ್ತದೆ. ನಿಮ್ಮ ಕಾರ್ಯಶೈಲಿ ಮೆಚ್ಚುಗೆ ಪಡೆದು ಮೇಲಾಧಿಕಾರಿಗಳು ನಿಮ್ಮನ್ನು ಆಯ್ಕೆ ಮಾಡಲಿದ್ದಾರೆ. ಪ್ರಯಾಣದ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಮರೆಯದೆ ಇಟ್ಟುಕೊಳ್ಳುವುದು ಕ್ಷೇಮ. ಪಶುಸಂಗೋಪನೆ ಕಾರ್ಯಗಳಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುತ್ತದೆ. ಆರ್ಥಿಕ ಬೆಳವಣಿಗೆ ಕಾಣಬಹುದಾದ ದಿನವಿದು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿರೀಕ್ಷಿತ ಆದಾಯಗಳು ವಿಳಂಬವಾಗುವ ಸಾಧ್ಯತೆ ಕಂಡು ಬರಲಿದೆ. ಉದ್ಯೋಗದಲ್ಲಿ ಸಹವರ್ತಿಗಳಿಂದ ಆಪಾದನೆಗಳು ಎದುರಾಗಬಹುದು. ಯೋಜನೆಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು ಮುಂದೆ ಸಾಗುವುದು ಒಳಿತು. ಬರುವ ಸಮಸ್ಯೆಯನ್ನು ದೃಢಮನಸ್ಸಿನಿಂದ ಎದುರಿಸಲು ಸಜ್ಜಾಗಿ. ಲಾಭಗಳಿಕೆಗೆ ಹಲವು ಅವಕಾಶಗಳು ಕಾಣಬರುತ್ತದೆ, ಅದನ್ನು ವ್ಯವಸ್ಥಿತ ಕಾರ್ಯಗಳಿಂದ ಪಡೆದುಕೊಳ್ಳುವುದು ಮುಖ್ಯ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಆಕಸ್ಮಿಕವಾಗಿ ನೀವು ಮಾತನಾಡುವ ಮಾತುಗಳು ಪ್ರಮಾದಕ್ಕೆ ಎಡೆಮಾಡಿಕೊಡಬಹುದು ಎಚ್ಚರವಿರಲಿ. ಆರ್ಥಿಕ ಸಹಾಯಕ್ಕಾಗಿ ಬಂಧುಮಿತ್ರರ ಬಳಿ ಕೇಳುವ ಸಾಧ್ಯತೆ ಕಾಣಬಹುದು. ಸಂಜೆಯ ವೇಳೆಗೆ ನಿಮ್ಮ ವೈಯಕ್ತಿಕ ಸಮಸ್ಯೆ ದೂರವಾಗಲಿದೆ. ಶಕ್ತಿ ದೇವತಾ ದರ್ಶನಕ್ಕೆ ಇಂದು ಹೋಗುವ ಸಾಧ್ಯತೆ ಕಾಣಬಹುದು. ಸಂಗಾತಿಯೊಡನೆ ಸಮಾರಂಭಗಳಿಗೆ ಭೇಟಿನೀಡುವ ಮನಸ್ಥಿತಿಯಲ್ಲಿರುವಿರಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕೆಲಸದಲ್ಲಿ ಕುಶಲತೆ ಉತ್ತಮವಾಗಿರುತ್ತದೆ. ನಿಮ್ಮ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಗುವುದು ನಿಶ್ಚಿತ. ವಿದೇಶ ಪ್ರಯಾಣದ ಚಿಂತನೆಗೆ ಮೂರ್ತಸ್ವರೂಪ ದೊರೆಯಲಿದೆ. ಅಪರಿಚಿತ ವ್ಯಕ್ತಿಗಳೊಡನೆ ವ್ಯವಹಾರ ಮಾಡುವಾಗ ಎಚ್ಚರಿಕೆ ಇರಲಿ. ಆಕಸ್ಮಿಕ ಧನಲಾಭ ವಾಗುವ ಸಾಧ್ಯತೆ ಕಂಡು ಬರಲಿದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಸ್ವಯಂ ಪ್ರೇರಣೆಯಿಂದ ಸಾಮಾಜಿಕ ಕಾರ್ಯಗಳಿಗೆ ನೀವು ದುಡಿಯುವಿರಿ. ನಿಮ್ಮ ಕೆಲವು ಆಲೋಚನೆಗಳು ಸೂಕ್ತ ಮನ್ನಣೆ ಸಿಗಲಿದೆ. ಭೋಜನದ ವ್ಯವಸ್ಥೆ ಅತ್ಯುತ್ತಮವಾಗಿ ಇರಲಿದೆ. ಮನೆಗೆ ಬರುವ ನೆಂಟರಿಂದ ಸಂತಸದ ವಾತಾವರಣ ಪ್ರಾಪ್ತಿಯಾಗುತ್ತದೆ. ನಿರೀಕ್ಷಿತ ಆದಾಯಗಳು ಸಮಯದ ಗತಿಯಲ್ಲಿ ಕೈಸೇರುವುದು ನಿಶ್ಚಿತ. ಮನರಂಜನೆಗೆ ಅವಕಾಶಗಳು ಸಿಗುವ ಸಾಧ್ಯತೆಯಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಸಂಕೋಚದ ಸ್ವಭಾವದಿಂದ ವರ್ತಿಸುವುದು ನಿಮ್ಮ ಕೆಲಸಗಳಿಗೆ ಹಿನ್ನಡೆ ಯಾಗಲು ಕಾರಣವಾಗಬಹುದು. ನೇರವಾದ ಮಾತು ಮತ್ತು ನಿಮ್ಮಲ್ಲಿ ಹೊಳೆಯುವ ಆಲೋಚನೆಗಳನ್ನು ಪ್ರಸ್ತುತಪಡಿಸಿ. ಆರ್ಥಿಕ ಸ್ಥಿತಿ ಸಾಧಾರಣವಾಗಿ ಇರಲಿದೆ. ಮುಂದಿನ ದಿನಗಳ ಅವಶ್ಯಕತೆಗಾಗಿ ಹಣಕಾಸನ್ನು ಕೊಡಿಡಬೇಕಾಗಿದೆ, ದುಂದುವೆಚ್ಚ ಮಾಡುವುದು ಒಳಿತಲ್ಲ. ಹಿರಿಯರ ಮಾತುಗಳನ್ನು ಆದಷ್ಟು ಪಾಲನೆ ಮಾಡುವುದು ಸೂಕ್ತ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button