ಪ್ರಮುಖ ಸುದ್ದಿ
ದಕ್ಷಿಣ ಕನ್ನಡ-1, ಕಲಬುರ್ಗಿ-2 ನಾಡಿನಲ್ಲಿ ಇಂದು 3 ಪ್ರಕರಣ ಮಾತ್ರ ಪತ್ತೆ
ಬೆಂಗಳೂರು: ರಾಜ್ಯದಲ್ಲಿ ಇಂದು ಕೇವಲ 3 ಕೊರೊನಾ ವೈರಸ್ ಸೋಂಕು ಪ್ರಕರಣ ಮಾತ್ರ ಕಂಡು ಬಂದಿದ್ದು ದೃಢಪಟ್ಟಿದೆ.
ಕರ್ನಾಟಕದಲ್ಲಿ ಇಲ್ಲಿಯವರೆಗೂ ಒಟ್ಟು 503 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ.
ಇಂದು ದಕ್ಷಿಣ ಕನ್ನಡದಲ್ಲಿ – 1, ಕಲಬುರಗಿ ಜಿಲ್ಲೆಯಲ್ಲಿ -2 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಒಟ್ಟು 3 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 503 ಕ್ಕೆ ಏರಿದೆ.
503 ಕೊರೊನಾ ಪ್ರಕರಣಗಳ ಪೈಕಿ 19 ಮಂದಿ ಮರಣ ಹೊಂದಿದ್ದಾರೆ. ಹಾಗೂ 182 ಜನ ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿ ತಿಳಿಸಿದ್ದಾರೆ.