ಕಾರ್ಗಿಲ್ ವಿಜಯೋತ್ಸವಃ ಹುತಾತ್ಮ ಯೋಧನ ಸ್ಮಾರಕಕ್ಕೆ ಪೂಜೆ
ಹುತಾತ್ಮ ಯೋಧನ ತಾಯಿಗೆ ಸನ್ಮಾನ ಗೌರವ
ಶಹಾಪುರಃ ಕಾರ್ಗಿಲ್ ಯುದ್ಧದ ವೇಳೆ ಜೀವದ ಹಂಗು ತೊರೆದು ದೇಶಕ್ಕಾಗಿ ತನ್ನ ಪ್ರಾಣವನ್ನೆ ಅರ್ಪಿಸಿದ ಹುತಾತ್ಮ ವೀರಯೋಧ ತಿಪ್ಪಣ್ಣಗೌಡ ಕಕ್ಕಸಗೇರಾ ಅವರ ಸ್ಮಾರಕಕ್ಕೆ ಇಲ್ಲಿನ ಕನ್ನಡಪರ ಸಂಘಟನೆ ಮುಖಂಡರು ವಿಶೇಷ ಪೂಜೆ ಸಲ್ಲಿಸಿ ಗೌರವಿಸಿದರು. ಅಲ್ಲದೆ ವೀರಯೋಧನ ಹೆತ್ತ ತಾಯಿ ಗೌರಮ್ಮ ಕಕ್ಕಸಗೇರಾ ಇವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ರವಿವಾರ ಕಾರ್ಗಿಲ್ ವಿಜಯೋತ್ಸವ ಆಚರಿಸಿದರು.
ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ತಾಲೂಕಿನ ಅರಳಳ್ಳಿ ಗ್ರಾಮದಲ್ಲಿರುವ ಹುತಾತ್ಮ ಯೋಧನ ಸ್ಮಾರಕಕ್ಕೆ ಕನ್ನಡಪರ ಸಂಘಟನೆಗಳು ವಿಶೇಷ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭೀಮಣ್ಣ ಶಖಾಪುರ, ಕಾರ್ಗಿಲ್ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿ ಹುತಾತ್ಮನಾದ ಸಹೋದರ ತಿಪ್ಪಣ್ಣಗೌಡ ಕಕ್ಕಸಗೇರಾ ಇವರ ಸ್ಮರಣಾರ್ಥವಾಗಿ ಇಂದು ನಾವೆಲ್ಲರೂ ಇಲ್ಲಿಗೆ ಆಗಮಿಸಿ ತಾಯಿ ಗೌರಮ್ಮ ಹಾಗೂ ಅವರ ಕುಟುಂಬಕ್ಕೆ ಗೌರವಿಸುವ ಮೂಲಕ ಮಗನನ್ನು ಕಳೆದುಕೊಂಡ ತಾಯಿ ಜೊತೆಗೆ ನಾವೆಲ್ಲ ಇದ್ದೇವೆ ಎಂಬ ಸಂದೇವನ್ನು ನೀಡಿದ್ದೇವೆ.
ಹುತಾತ್ಮ ಹೊಂದಿದ ಯೋಧನ ಆತ್ಮಕ್ಕೂ ಚಿರಶಾಂತಿ ನೀಡಲಿ ಎಂದು ಪ್ರಾಥನೆ ಸಲ್ಲಿಸಿದ್ದು, ಮುಂಬರುವ ದಿನಗಳಲ್ಲಿ ಹುತಾತ್ಮ ಯೋಧನ ಸ್ಮಾರಕ ಅಭಿವೃದ್ಧಿ ಪಡಿಸಬೇಕೆಂದು ತಾಲೂಕು ಆಡಳಿತಕ್ಕೆ ಮನವಿ ಮಾಡಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮೌನೇಶ ಸುರಪುರಕರ್, ವೆಂಕಟೇಶ ಬೋನೇರ, ನೆಹರು ಹಳಿಸಗರ ಸೇರಿದಂತೆ ಇತರರಿದ್ದರು.