ಪ್ರಮುಖ ಸುದ್ದಿ
ಕೊಡಗಿನಲ್ಲಿ ಭಾರಿ ಮಳೆಃ ಹವಮಾನ ಇಲಾಖೆ ಮುನ್ಸೂಚನೆ
ಭಾರಿ ಮಳೆ ಮುಂಜಾಗೃತ ಕ್ರಮಕ್ಕೆ ಜಿಲ್ಲಾಡಳಿತ ಸಜ್ಜು
ಕೊಡಗುಃ ಆ.5 ರಿಂದ ನಾಲ್ಕು ದಿನಗಳವರೆಗೂ ಕೊಡಗು ಭಾಗದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ಪ್ರಕಟಿಸಿದೆ.
ಹೀಗಾಗಿ ಇಲ್ಲಿನ ಜಿಲ್ಲಾಧಿಕಾರಿಗಳು ಕೊಡಗು ಜಿಲ್ಲಾದ್ಯಂತ ಮಳೆಯಿಂದುಂಟಾಗುವ ಸಮಸ್ಯೆಗಳನ್ನು ಎದರಿಸಲು ಜಿಲ್ಲಾಡಳಿತ ಸಿದ್ಧತೆಯಲ್ಲಿರುವಂತೆ ಕ್ರಮಕೈಗೊಂಡಿದ್ದಾರೆ. ಅಲ್ಲದೆ ಜನರು ಜಾಗೃತರಾಗಿ ಮಳೆಯಿಂದಾಗಿ ಬರುವ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಬೇಕಿದೆ.
ಜಿಲ್ಲಾಡಳಿತ ನಿಮ್ಮ ಜೊತೆ ಇರಲಿದ್ದು, ನಾಗರಿಕರು ಸಾರ್ವಜನಿಕರು ಸಹಭಾಗಿತ್ವವು ಅಗತ್ಯ ಎಂದು ತಿಳಿಸಿದ್ದಾರೆ.