ಪ್ರತಿ ಕ್ವಿಂಟಲ್ ತೊಗರಿಗೆ 8 ಸಾವಿರ ರೂ. ನಿಗದಿಗೆ ಬಿಜೆಪಿ ಆಗ್ರಹ
ಶಹಾಪುರಃ ತೊಗರಿ ಖರೀದಿ ಕೇಂದ್ರ ತೆರೆಯಲು ಬಿಜೆಪಿ ಮನವಿ
ಶಹಾಪುರಃ ಸರ್ಕಾರ ಈ ಬಾರಿ ತೊಗರಿ ಕೇಂದ್ರಗಳನ್ನು ಹೋಬಳಿಗೊಂದರಂತೆ ಆರಂಭಿಸಬೇಕು. ಮತ್ತು ಪ್ರತಿ ಕ್ವಿಂಟಲ್ ತೊಗರಿಗೆ 8 ಸಾವಿರ ರೂ. ನೀಡಬೇಕೆಂದು ಆಗ್ರಹಿಸಿ ಇಲ್ಲಿನ ಬಿಜೆಪಿ ರೈತ ಘಟಕ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು.
ಕಳೆದ ವರ್ಷ ಸರ್ಕಾರ ಕಾಟಚಾರಕ್ಕೆ ಅಲ್ಲೊಂದು ಇಲ್ಲೊಂದು ತೊಗರಿ ಮಾರಾಟ ಕೇಂದ್ರ ತೆರೆಯುವ ಮೂಲಕ ಸಮರ್ಪಕ ರೈತರ ತೊಗರಿ ಖರೀದಿಸದೆ ಅಧಿಕಾರಿಗಳ ಅಣತಿಯಂತೆ ಪ್ರಮುಖರ ತೊಗರಿ ಮಾತ್ರ ಖರೀದಿ ಮಾಡಿದ್ದಾರೆ. ಬಡ ರೈತರ ತೊಗರಿ ಖರೀದಿ ಮಾಡದೆ ಹಿಂದುರಿಗಿಸಿದ್ದಾರೆ. ಅಲ್ಲದೆ ಸಮಯ ಮೀರಿದೆ ಎಂದು ವಾಪಾಸ್ ಕಳುಹಿಸಿದ್ದಾರೆ ಎಂದು ಆರೋಪಿಸಿದರು.
ಈ ಬಾರಿ ಸಮರ್ಪಕವಾಗಿ ಎಲ್ಲಾ ರೈತರ ತೊಗರಿ ಖರೀದಿಗೆ ಅವಕಾಶ ಕಲ್ಪಿಸಬೇಕು. ತೊಗರಿ ಕೇಂದ್ರಕ್ಕೆ ಬಂದ ಎಲ್ಲರ ರೈತರ ತೊಗರಿ ತೆಗೆದುಕೊಳ್ಳಬೇಕು. ಕಳೆದ ಬಾರಿ ಆಯ ಕೇಂದ್ರಗಳಲ್ಲಿ ಕಾಂಗ್ರೆಸ್ ನಾಯಕರ ಅಣಿತಿಯಂತೆ ತೊಗರಿ ಖರೀದಿಸಲಾಗಿದೆ. ಬೇರೆಯವರ ಬಡ ರೈತರ ತೊಗರಿ ಬೇಕಾಬಿಟ್ಟಿಯಾಗಿ ಮಾರಾಟ ಮಾಡಿದ್ದು, ಸಾಕಷ್ಟು ನಷ್ಟ ಅನುಭವಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಮಾರಾಟ ಕೇಂದ್ರದಲ್ಲಿ ದಲ್ಲಾಳಿಗಳ ಆರ್ಭಟವಿದ್ದು, ಬಡ ರೈತರ ತೊಗರಿ ಬೇಕಾಬಿಟ್ಟಿಯಾಗಿ ಅಳತೆ ಮಾಡಲಾಗುತ್ತಿದೆ. ತೂಕದಲ್ಲಿ ಕಳುವು ಮಾಡುತ್ತಿದ್ದು, ರೈತರಿಗೆ ವಂಚನೆ ಎಸಗಲಾಗುತ್ತಿದೆ. ಈ ಕುರಿತು ಅಧಿಕಾರಿಗಳು ಗಮನ ಹರಿಸುವ ಮೂಲಕ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಕಳೆದ ಬಾರಿ ವಾರಗಟ್ಟಲೆ ತೊಗರಿ ಕೇಂದ್ರದ ಮುಂದೆ ಸಾಲುಗಟ್ಟಿ ತೊಗರಿ ಚೀಲ ಹಚ್ಚಿದರು ಖರೀದಿಗೆ ತೆಗೆದುಕೊಂಡಿಲ್ಲ. ವಾಪಾಸ್ ಕಳುಹಿಸಿದ್ದಾರೆ. ತೊಗರಿ ಕೇಂದ್ರಗಳಲ್ಲಿ ವ್ಯಾಪಕ ಭ್ರಷ್ಟತೆ ನಡೆದಿದೆ ಎಂದು ಆರೋಪಿಸಿದರು. ಇದೇ ತಿಂಗಳಲ್ಲಿ ತೊಗರಿ ಕಟಾವು ನಡೆಯಲಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಈ ಬಾರಿ ರೈತರಿಗೆ ಅನ್ಯಾಯವಾಗದಂತೆ ಮುನ್ನೆಚ್ಚರಿಕೆವಹಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಘಟಕ ಅಧ್ಯಕ್ಷ ಡಾ.ಮಲ್ಲಣ್ಣಗೌಡ ಉಕ್ಕಿನಾಳ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಸೀಲ್ ಕಚೇರಿ ಸಿಬ್ಬಂದಿ ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಯಲ್ಲಯ್ಯ ನಾಯಕ ವನದುರ್ಗ, ಅಮರೇಶಗೌಡ, ಶರಣಪ್ಪ ಹೋತಪೇಠ, ಅಡಿವೆಪ್ಪ ಜಾಕಾ, ರಾಜಶೇಖರ ಗೂಗಲ್, ವೆಂಕಟೇಶ ಆಲೂರ, ತ್ರೀಶೂಲ್ ಹವಲ್ದಾರ, ಮಲ್ಲಿಕಾರ್ಜುನ ಅಂಗಡಿ, ಸಂಜೀವರಡ್ಡಿ ಬೂದನೂರ, ಬಾಬಣ್ಣ ನಾಟೇಕಾರ, ಹಣಮಂತ ಸಗರ, ರವಿಚಂದ್ರ, ಸುಭಾಶ ತಳವಾರ, ಭೀಮರಾಯ ನರಿಬೋಳ, ಹಣಮಂತ ಸಗರ, ರೇವಣಸಿದ್ದಪ್ಪ, ನರಸಪ್ಪ ಭಜಂತ್ರಿ, ತಿಪ್ಪಣ್ಣ ರಾಠೋಡ ಸೇರಿದಂತೆ ಮಹೇಶ ಇತರರಿದ್ದರು.