ಪ್ರಮುಖ ಸುದ್ದಿ
ಸಿಡಿಲು ಬಡಿದು ಇಬ್ಬರು ಕುರಿಗಾಯಿ ಸಾವು
ತಾತಾ ಮತ್ತು ಮೊಮ್ಮಗ ಸಿಡಿಲಿಗೆ ಬಲಿ
ಯಾದಗಿರಿಃ ಮಳೆಯಿಂದ ರಕ್ಷಣೆ ಪಡೆಯುವದಕ್ಕಾಗಿ ಜಮೀನೊಂದಕ್ಕೆ ಹೊಂದಿಕೊಂಡಿದ್ದ ಬೆಟ್ಟದ ಬಂಡೆಕಲ್ಲುಗಳ ಮಧ್ಯೆ ಕುಳಿತಿದ್ದ ಇಬ್ಬರು ಕುರಿಗಾಯಿಗಳು ಸಿಡಿಲಿಗೆ ಬಲಿಯಾದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಗ್ರಾಮದ ಬೆಟ್ಟದಲ್ಲಿ ನಡೆದಿದೆ.
ನಗನೂರ ಗ್ರಾಮದ ಮಲ್ಲಪ್ಪ (50) ಮತ್ತು ಮೊಮ್ಮಗ ಕುಮಾರ(14) ಎಂಬುವರೇ ಸಿಡಿಲಿಗೆ ಬಲಿಯಾದ ದುರ್ದೈವಿಗಳು ಎಂದು ತಿಳಿದು ಬಂದಿದೆ. ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.