ಶಹಾಪುರಃ ಬಿಜೆಪಿಯಿಂದ ವೃಕ್ಷಾರೋಹಣ ಕಾರ್ಯಕ್ರಮ
ಮಾಜಿ ಶಾಸಕ ಶಿರವಾಳ ಸಸಿ ನೆಟ್ಟು ಚಾಲನೆ
yadgiri,ಶಹಾಪುರಃ ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದ್ದು, ಅದನ್ನು ಸಮರ್ಪಕವಾಗಿ ಜವಬ್ದಾರಿಯಿಂದ ಎಲ್ಲರೂ ನಿಭಾಯಿಸಬೇಕಿದೆ. ಆ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಘಟಕ ವೃಕ್ಷಾರೋಹಣ ಕಾರ್ಯಕ್ರಮ ಮೂಲಕ ಪರಿಸರ ಸಂರಕ್ಷಣೆ ಜೊತೆಗೆ ಮನೆಗೊಂದು ಗಿಡ ವಾರ್ಡಿಗೊಂದು ವನ ನಿರ್ಮಿಸುವ ಸಂಕಲ್ಪ ತೊಟ್ಟಿದೆ. ಆ ಹಿನ್ನೆಲೆಯಲ್ಲಿ ಕಾರ್ಯಕರ್ತರು ಗಿಡ ಬೆಳೆಸುವದು ಪರಿಸರ ರಕ್ಷಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಗುರು ಪಾಟೀಲ್ ಕರೆ ನೀಡಿದರು.
ಬಿಜೆಪಿ ನಗರ ಘಟಕದಿಂದ ಮಂಗಳವಾರ ವಾರ್ಡ್ ಸಂಖ್ಯೆ 20 ರಲ್ಲಿ ಆಯೋಜಿಸಲಾಗಿದ್ದ ವೃಕ್ಷಾರೋಹಣ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಪ್ರಕೃತಿಯನ್ನು ನಾವು ಉಳಿಸಿ ಬೆಳೆಸಬೇಕಿದೆ. ಪ್ರಕೃತಿ ಮೇಲೆ ಮಾನವರ ದಬ್ಬಾಳಿಕೆ ಜಾಸ್ತಿಯಾಗಿದೆ.ಜ್ಯನಿಯ ಭಾವನೆಯಿಂದ ಕಂಡರೆ ಅದರ ರಕ್ಷಣೆ ಸಾಧ್ಯವಿದೆ. ಇಲ್ಲವಾದಲ್ಲಿ ಮುಂಬುರವ ದಿನಗಳು ಇನ್ನಷ್ಟು ಕಠಿಣವಾಗಲಿವೆ. ಈಗಾಗಲೇ ಕೊರೊನಾ ಮಹಾಮಾರಿ ಎಲ್ಲರನ್ನು ಕಾಡುತ್ತಿದೆ. ಕೊರೊನಾ ತಡೆಗೆ ಎಲ್ಲರೂ ಆರೋಗ್ಯ ಇಲಾಖೆ ನೀಡಿದ ಸೂಚನೆ ನಿಯಮಗಳನ್ನು ಪಾಲಿಸಬೇಕು. ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಆಷ್ಟು ಆಗಾಗಾ ಸಾಬೂನಿನಿಂದ ಕೈತೊಳೆದುಕೊಳ್ಳಬೇಕು ಇತರೆ ನಿಯಮಗಳನ್ನು ಎಲ್ಲರೂ ಪಾಲಿಸಬೇಕೆಂದು ಮನವಿ ಮಾಡಿದರು.
ನಗರದ ಎಲ್ಲಾ ವಾರ್ಡ್‍ಗಳಲ್ಲಿ ಸಸಿಗಳನ್ನು ನೆಡಲಾಯಿತು. ಆಯಾ ವಾರ್ಡ್ ಪದಾಧಿಕಾರಿಗಳು ಮತ್ತು ಬಿಜೆಪಿ ನಗರಸಭೆ ಸದಸ್ಯರು ತಮ್ಮ ತಮ್ಮ ವಾರ್ಡ್‍ಗಳಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚಣೆ ಆಚರಿಸಲು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡ ಮಲ್ಲಿಕಾರ್ಜುನ ಚಿಲ್ಲಾಳ, ನಗರ ಬಿಜೆಪಿ ಅಧ್ಯಕ್ಷ ದೇವು ಕೋನೇರ, ಸಿದ್ದಯ್ಯಸ್ವಾಮಿ ಹಿರೇಮಠ, ಬಸನಗೌಡ ರಾಕಂಗೇರಾ, ಅಶೋಕ ನಾಯಕ, ವೀರೇಶ ಅಡಕಿ, ಅಮರೀಶ ನಂದಿಕೋಲ್, ಸುನೀಲ್ ಗಣಾಚಾರಿ, ಬಸವರಾಜ ಹೆಮ್ಮಡಗಿ, ಮಂಜು ಗಣಾಚಾರಿ, ರಾಘವೆಂದ್ರ ಯಕ್ಷಿಂತಿ, ವಾರ್ಡ್ ಪ್ರಮುಖ ಸೋಪಣ್ಣ, ಉಮೇಶ ಮಹಾಮನಿ ಇತರರಿದ್ದರು.