ಪ್ರಮುಖ ಸುದ್ದಿ
ದೀಪಕ್ ಹತ್ಯೆ, ಹಂತಕರಿಗೆ ತಕ್ಕ ಶಿಕ್ಷೆಃ ಗೃಹ ಸಚಿವ ರಾಮಲಿಂಗಾರಡ್ಡಿ ಭರವಸೆ
ದೀಪಕ್ ಮನೆಗೆ ಗೃಹ ಸಚಿವ ರಾಮಲಿಂಗಾರಡ್ಡಿ ಭೇಟಿ ಸಾಂತ್ವನ
ದಕ್ಷಿಣಕನ್ನಡಃ ಜಿಲ್ಲೆಯ ಮಂಗಳೂರ ತಾಲೂಕಿನ ಕಾಟಿಪಳ್ಳಿ ಗ್ರಾಮದಲ್ಲಿ ಕೊಲೆಯಾದ ದೀಪಕ್ ರಾವ್ ಮನೆಗೆ ಗೃಹಮಂತ್ರಿ ರಾಮಲಿಂಗಾರಡ್ಡಿ ಭೇಟಿ ನೀಡಿ ತಾಯಿ ಪ್ರೇಮಲತಾ ಸಹೋದರ ಸತೀಶಗೆ ಸಾಂತ್ವನ ಹೇಳಿದರು.
ಇದೇ ಸಂದರ್ಭದಲ್ಲಿ ದೀಪಕ್ ಕೊಲೆಗೈದ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸುವದಾಗಿ ಕುಟಂಬಸ್ಥರಿಗೆ ಭರವಸೆ ನೀಡಿದರು. ಘಟನೆ ದಿನವೇ ಬರಬೇಕೆಂದಿದ್ದೆ ಆದರೆ ಕಾರಣಾಂತರದಿಂದ ಬರಲಾಗಲಿಲ್ಲ ಎಂದ ಅವರು, ಈಗಾಗಲೇ ಸಿಎಂ ಸಿದ್ರಾಮಯ್ಯನವರು ಭೇಟಿ ನೀಡಿದ್ದಾರೆ. ದೀಪಕ್ ಕೊಲೆ ಮಾಡಿದ ಹಂತಕರಿಗೆ ಶಿಕ್ಷೆಯಾದರೆ ಮೃತ ದೀಪಕ ಆತ್ಮಕ್ಕೆ ಶಾಂತಿ ದೊರೆಯಲಿದೆ ಎಂದರು.
ಶರತ್ ಮಡಿವಾಳ ಕೊಲೆಯಾದಾಗ ನಾನು ಗೃಹಮಂತ್ರಿ ಇರಲಿಲ್ಲಿ ಹೀಗಾಗಿ ಶರತ್ ಕುಟುಂಬಸ್ಥರಿಗೆ ಸರ್ಕಾರ ಎಷ್ಟು ಪರಿಹಾರ ನೀಡಿದೆ ಎಂಬುದು ಮಾಹಿತಿ ಇಲ್ಲ. ಕೂಡಲೇ ಸಮರ್ಪಕ ಮಾಹಿತಿ ಪಡೆಯುವೆ ಎಂದು ತಿಳಿಸಿದರು.