ಲೋ ಬಿಪಿಯೇ.? ತಕ್ಷಣಕ್ಕೆ ನೀಡಿ ಈ ಮನೆ ಮದ್ದು.!
ಲೋ ಬಿಪಿಯೇ.? ತಕ್ಷಣಕ್ಕೆ ನೀಡಿ ಈ ಮನೆ ಮದ್ದು.!
ವಿವಿ ಡೆಸ್ಕ್ಃ ಲೋ-ಬಿಪಿಯಾದಾಗ ಸಾಕಷ್ಟು ಜನರು ಗಾಬರಿಯಾಗುತ್ತಾರೆ. ರಕ್ತದೊತ್ತಡ ಸುಸ್ಥಿತಿಗೆ ಬರಲು ವೈದ್ಯರೂ ಒದ್ದಾಡುತ್ತಾರೆ. ಕೆಲ ವೇಳೆ ಲೋಬಿಪಿಯಾಗಿದೆ ಚಿಕಿತ್ಸೆ ತುಂಬಾ ಕಷ್ಟಕರ ಎಂದು ಗುನುಗುತ್ತಿರುವದನ್ನು ಕಂಡಿದ್ದೇವೆ. ಆದರೆ ತಕ್ಷಣೆ ಮನೆ ಮದ್ದು ನೆನಪಾಗುವದಿಲ್ಲ.
ಇಲ್ಲದೆ ಸಿಂಪಲ್ ಮನೆ ಮದ್ದು, ಉಪ್ಪಿನಲ್ಲಿರುವ ಸೋಡಿಯಂ ಅಂಶ ರಕ್ತದೊತ್ತಡ ಹೆಚ್ಚುವಂತೆ ಮಾಡಲಿದೆ. ಹೀಗಾಗಿ ನೀರಿನಲ್ಲಿ ಉಪ್ಪು ಬೆರೆಸಿ ಕುಡಿಯಬೇಕು. ತಕ್ಷಣಕ್ಕೆ ಬಿಪಿ ಲೋ ಸುಸ್ಥಿತಿಗೆ ಬರಲಿದೆ. ಅತಿಯಾದ ಉಪ್ಪು ಬೆರೆಸುವದು ಬೇಡ. ಮಿತವಾಗಿ ಹಿತವಾಗಿ ಉಪ್ಪನ್ನು ನೀರಿನಲ್ಲಿ ಬೆರಿಸಿ ಕುಡಿಯಬೇಕು.
ಅಲ್ಲದೇ ಲೋಬಿಪಿ ಇರುವ ವ್ಯಕ್ತಿ ಹೊರಗಡೆ ಇದ್ದಾಗ ಸಂಭವಿಸಿದಲ್ಲಿ ತಕ್ಷಣ ಸ್ಟ್ರಾಂಗ್ ಕಾಫಿ ಕುಡಿಯಬೇಕು. ಇದು ತಕ್ಷಣ ಪ್ರಭಾವ ಬೀರಲಿದೆ. ಇದಲ್ಲದೆ ಕೆಫೆನ್ ಯುಕ್ತ ಚಾಕೊಲೆಟ್ ಗಳನ್ನು ಸೇವನೆ ಮಾಡಬಹುದು. ಇದು ತುಂಬಾ ಉಪಯುಕ್ತವಿದೆ.
ಮತ್ತು ರಾತ್ರಿಯಿಡಿ ನೀರಿನಲ್ಲಿ ನೆನೆಸಿಟ್ಟ ಒಣ ದ್ರಾಕ್ಷಿ ಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಿಂದಲೂ ಲೋಬಿಪಿ ವರ್ಜಿಸಿ ರಕ್ತದೊತ್ತಡ ಹೆಚ್ಚಾಗಲಿದೆ. ಮತ್ತು ತುಳಸಿ ಅರ್ಕ್ ನೀರಿನಲ್ಲಿ ಒಂದೆರಡು ಡ್ರಾಪ್ ಹಾಕಿ ಬಳಸುವದರಿಂದಲೂ ರಕ್ತದೊತ್ತಡ ಸಮಸ್ಥಿತಿಗೆ ಬರಲಿದೆ. ತುಳಸಿಯಲ್ಲಿ ವಿಟಮಿನ್ “ಸಿ” , ಪೊಟ್ಯಾಶಿಯಂ, ಮ್ಯಾಗ್ನೇಶಿಯಂ ಮುಂತಾದ ಸತ್ವಗಳು ಮೆದಳು ಮತ್ತು ದೇಹವನ್ನು ಸುಸ್ಥಿತಿಗೆ ತರಲಿದೆ.