ಡಿಸೇಲ್ ಟ್ಯಾಂಕ್ ವಾಹನ ಪಲ್ಟಿಃ ಡಿಸೇಲ್ ಒಯ್ಯಲು ಮುಗಿ ಬಿದ್ದ ಜನ, ಪೊಲೀಸರಿಂದ ಜಾಣ್ಮೆಯ ಕ್ರಮ
ಶಹಾಪುರಃ ಡಿಸೇಲ್ ಟ್ಯಾಂಕರ್ ಪಲ್ಟಿ, ಪೊಲೀಸರಿಂದ ಜಾಣ್ಮೆಯ ಕ್ರಮ
ಯಾದಗಿರಿಃ ಚಾಲಕನ ನಿಯಂತ್ರಣ ತಪ್ಪಿ ಡಿಸೇಲ್ ಟ್ಯಾಂಕ್ ವಾಹನವೊಂದು ರಸ್ತೆ ಮೇಲೆ ಪಲ್ಟಿಯಾದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಹುಲಕಲ್ ಗ್ರಾಮ ಸಮೀಪ ಹೆದ್ದಾರಿ ಮೇಲೆ ಶುಕ್ರವಾರ ಸಂಜೆ ನಡೆದಿದೆ.
ರಾಯಚೂರಿನಿಂದ ಕಲಬುರ್ಗಿಗೆ ಹೊರಟಿದ್ದ ಡಿಸೇಲ್ ಟ್ಯಾಂಕ್ ಹುಲಕಲ್ ಗ್ರಾಮದ ಹತ್ತಿರ ಹೆದ್ದಾರಿ ಪಕ್ಕಕ್ಕೆ ಉರುಳಿದೆ. ಡಿಸೇಲ್ ಟ್ಯಾಂಕ್ ಬೀಳೂತ್ತಿದ್ದಂತೆ ಸೋರಿಕೆಯಾಗುತ್ತಿರುವ ಡಿಸೇಲ್ ತುಂಬಿಸಿಕೊಳ್ಳಲು ಜನ ಜಮಾವಣೆಗೊಂಡಿದೆ. ಕೈಯಲ್ಲಿ ಪ್ಲಾಸ್ಟಿಕ್ ಬಾಟಲ್, ಪುಟ್ಟಿ ಸೇರಿದಂತೆ ಪ್ಲಾಸ್ಟೀಕ್ ಚೀಲಗಳಲ್ಲಿ ಡಿಸೇಲ್ ತುಂಬಿಕೊಳ್ಳಲು ಮುಗಿಬಿದಿದ್ದಾರೆ.
ಅಪಾರ ಪ್ರಮಾಣದ ಡಿಸೇಲ್ ಸೋರಿಕೆಯಾಗಿದ್ದು, ಜನ ಪ್ರಾಣ ಅಪಾಯ ಅರಿಯದೆ ಡಿಸೇಲ್ ತುಂಬಿಕೊಳ್ಳುತ್ತಿರುವುದು ದುರದೃಷ್ಟಕರ. ಇದರಲ್ಲಿ ಮಹಿಳೆಯರು ಹಿಂದೆ ಬಿದ್ದಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ವಿಷಯ ತಿಳಿದ ಬೀ.ಗುಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಜನರನ್ನು ಚದುರಿಸಿದ್ದಾರೆ. ಅಲ್ಲದೆ ತಕ್ಷಣ ಅಗ್ನಿಶಾಮಕ ದಳದವರಿಗೆ ಫೋನಾಯಿಸಿ ಕರೆಯಿಸಿ, ರಸ್ತೆ ಮೇಲೆ ಸುರಿದ ಡಿಸೇಲ್ ಮೇಲೆ ನೀರುಣಿಸಿದ್ದಾರೆ. ನಂತರ ಮಣ್ಣು ಸುರಿಸುವ ಮೂಲಕ ಅಪಾಯದ ಮಟ್ಟವನ್ನು ನಿಯಂತ್ರಿಸುವಲ್ಲಿ ಜಾಣ್ಮೆಯ ಕ್ರಮಕೈಗೊಂಡಿದ್ದಾರೆ.
ಗುರುವಾರ ತಾಲೂಕಿನ ದೋರನಹಳ್ಳಿ ಗ್ರಾಮದ ಹತ್ತಿರ ರಸ್ತೆಗೆ ಉರುಳಿದ್ದ ಕಬ್ಬಿನ ಲಾರಿಯಿಂದ ಇಡಿ ಕಬ್ಬುಗಳನ್ನು ಜನ ಬಂಡಿ, ಬೈಕ್ ಮೇಲೆ ಹೊತ್ತೊಯ್ದಿದ್ದರು. ಇಂದು ಡಿಸೇಲ್ ಕದ್ದು ಒಯ್ಯುತ್ತಿರುವುದು ವಿಷಾಧದ ಸಂಗತಿ. ಇಂತಹ ಸಮಯದಲ್ಲಿ ಸ್ವಲ್ಪ ಬೆಂಕಿ ಕಿಡಿ ಹೊತ್ತಿ ಉರಿದಿದ್ದರೆ, ಡಿಸೇಲ್‍ಗಾಗಿ ಬಡಿದಾಡುತ್ತಿದ್ದವರ ಹೆಣವು ಗುರುತಿಸಲು ಆಗದಂತ ದುರಂತ ಸಂಭವಿಸುವ ಸಾಧ್ಯತೆ ಉಂಟು. ಆದರೆ ಅಂತಹ ಘಟನೆ ನಡೆಯದಿರುವುದು ಸಮಾಧಾನ ತಂದಿದೆ.
——————–
ಅಪಾಯದ ಮುನ್ಸೂಚನೆ ಅರಿತ ಪೊಲೀಸರು.!
ವಿಷಯ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದೇವು. ಡಿಸೇಲ್ ಸೋರಿಕೆ ಸ್ಥಿತಿ ನೋಡಿ. ಮೊದಲು ಜನರನ್ನು ಚದುರಿಸಿ, ಮಣ್ಣು ಎರಚಿದೇವು. ಅಗ್ನಿ ಶಾಮಕದಳದವರನ್ನು ಕರೆಯಿಸಿ, ನೀರುಣಿಸುವ ಮೂಲಕ ಅಪಾಯದ ಮುನ್ಸೂಚನೆ ತಡೆಯಲು ಪ್ರಯತ್ನಿಸಿದೇವು. ವಾಹನದ ಚಾಲಕ, ಕ್ಲೀನರ್‍ಗೆ ಯಾವುದೇ ಗಾಯಗಳಾಗಿಲ್ಲ.
–ಹಣಮಂತ್ರಾಯ ಎಎಸ್‍ಐ ಭೀಗುಡಿ
ಪೊಲೀಸ್ ಠಾಣೆ. ಶಹಾಪುರ.
———————-
ಪ್ರತ್ಯಕ್ಷದರ್ಶಿಯ ಮಾತು..
ಡಿಸೇಲ್ ಟ್ಯಾಂಕ್ ವಾಹನ ಪಲ್ಟಿಯಾಗುವ ಸಮಯ ನಾವು ಹಿಂದೆಯೇ ಕಲಬುರ್ಗಿಗೆ ಹೊರಟಿದ್ದೇವು. ಗಾಬರಿಯಾಗಿ ತಕ್ಷಣ ನಿಂತೇವು. ಕೆಲವೇ ಕ್ಷಣದಲ್ಲಿ ಜನ ಬಾಟಲ್, ಪುಟ್ಟಿ ಇತರೆ ಸಾಮಾನುಗಳಿಂದ ಡಿಸೇಲ್ ತುಂಬಲು ಮುಗಿಬಿದ್ದರು. ಬೆಂಕಿ ಹೊತ್ತಿದರೆ ಅನಾಹುತವಾಗುತ್ತೆ ಬನ್ರಿ ಎಂದೂ ಹೇಳಲು ಪ್ರಯತ್ನಿಸಿದೇವು ಯಾರು ಕೇಳುವ ಧಾವಂತದಲ್ಲಿರಲಿಲ್ಲ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು.
–ಸಂತೋಷ ಸತ್ಯಂಪೇಟೆ. ವಕೀಲರು. ಪ್ರತ್ಯಕ್ಷದರ್ಶಿ.