ಪ್ರಮುಖ ಸುದ್ದಿ
ಮಧುಮೇಹಕ್ಕೆ ಮಲಬಾರ್ ಚಹ ಉತ್ತಮ ಔಷಧಿಃ ಸಚಿವ ನಾರಾಯಣಗೌಡ
ಬೆಂಗಳೂರಃ ಮಲಬಾರ್ ಚಹಾ ಮದುಮೇಹಕ್ಕೆ ಉತ್ತಮ ಔಷಧಿಯಾಗಿದ್ದು, ಉತ್ಪಾದನೆ ಹೆಚ್ಚಿಸಬೇಕು ಎಂದು ತೋಟಗಾರಿಕೆ, ಪೌರಾಡಳಿತ, ರೇಷ್ಮೆ ಇಲಾಖೆ ಸಚಿವ ನಾರಾಯಣಗೌಡ ಅಧಿಖಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರಿನ ಐಎಎಸ್ ಅಸೋಸಿಯೇಶನ್ನಲ್ಲಿ ತಮ್ಮ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಅವರು, ಮಲಬಾರ್ ಚಹಾಕ್ಕೆ ಹೆಚ್ಚಿನ ಪ್ರಚಾರ ನೀಡಿ ಮಾರುಕಟ್ಟೆ ಸೃಷ್ಟಿಸಬೇಕಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಮಲಬಾರ್ ಚಹಾಕ್ಕೆ ಪ್ರಚಾರದ ಜೊತೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಅವರು ಸೂಚಿಸಿದ್ದಾರೆ.
ಇದೇ ವೇಳೆ ಮುನ್ಸಿಪಲ್ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ತುಂಬಾ ನಿಧಾನಗತಿಯಲ್ಲಿದೆ. ಸಾಕಷ್ಟು ವರ್ಷಗಳಿಂದ ತೆರಿಗೆ ಕಟ್ಟುವುದನ್ನು ಅಲ್ಲಿ ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ತೆರಿಗೆ ಸಂಗ್ರಹಕ್ಕೆ ಸಮಯದ ಟಾರ್ಗೆಟ್ ನೀಡಿ ತೆರಿಗೆ ಸಂಗ್ರಹದ ಕಾರ್ಯ ಆಗಬೇಕು. ತೆರಿಗೆ ವಸೂಲಿ ಕಳಪೆ ಸಾಧನೆಗೆ ಅಧಿಕಾರಿಗಳೇ ನೇರ ಹೊಣೆ ಎಂದು ಅಧಿಕಾರಿಳಿಗೆ ಅವರು ಎಚ್ಚರಿಕೆ ನೀಡಿದ್ದಾರೆ.