ಡಿಸಿಎಂ ಸ್ಥಾನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಶ್ರೀರಾಮುಲು ಅಭಿಮಾನಿಗಳಿಂದ ಪ್ರತಿಭಟನೆ
ಯಾದಗಿರಿ, ಶಹಾಪುರಃ ನಾಯಕ ಜನಾಂಗದ ರಾಜ್ಯ ನಾಯಕ ಬಿ.ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡಬೇಕೆಂದು ಆಗ್ರಹಿಸಿ ಇಲ್ಲಿನ ಹೈದ್ರಾಬಾದ ಕರ್ನಾಟಕ ಬಿ.ಶ್ರೀರಾಮುಲು ಅಭಿಮಾನಿ ಸಂಘ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಚರಬಸವೇಶ್ವರ ಕಮಾನನಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ಬಸವೇಶ್ವರ ವೃತ್ತದಲ್ಲಿ ಅನಾವರಣಗೊಂಡು ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ ಸಿಬ್ಬಂದಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ರಾಜ್ಯ ಅಧಿಕಾರದ ಚುಕ್ಕಾಣಿ ಹಿಡಿಯುವದು ಸೇರಿದಂತೆ ರಾಜ್ಯದಲ್ಲಿ ನಡೆದ ವಿಧಾನಸಭೆ ಮತ್ತು ಲೋಕಾಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವಲ್ಲಿ ಶ್ರೀರಾಮುಲು ಅವರ ಮುಖ್ಯ ಕಾರಣರಾಗಿದ್ದಾರೆ, 70 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಾಯಕ ಜನಾಂಗ ಅವರ ಹಿಂದಿದೆ. ಶೇ.80 ರಷ್ಟು ನಮ್ಮ ಜನ ಸಮುದಾಯ ಬಿಜೆಪಿಗೆ ಮತ ನೀಡಿದೆ. ಅದಕ್ಕೆ ಶ್ರೀರಾಮುಲು ಅವರ ವರ್ಚಸ್ಸೆ ಕಾರಣ ಎಂದು ಪ್ರತಿಭಟನಾ ನಿರತರು ತಿಳಿಸಿದರು.
ಕಾರಣ ಸಿಎಂ ಯಡಿಯೂರಪ್ಪನವರು ಕೂಡಲೇ ಈ ಕುರಿತು ಹೈಕಮಾಂಡ್‍ಗೆ ಮಾಹಿತಿ ನೀಡಿ ಕೂಡಲೇ ಡಿಸಿಎಂ ಸ್ಥಾನಕ್ಕೆ ಅರ್ಹತೆ ಹೊಂದಿದ್ದ ಪಕ್ಷದ ಸಂಘಟನೆಗೆ ಹಗಲಿರುಳು ಶ್ರಮಿಸಿದ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಆಗ್ರಹಿಸಿದರು.
ಅಲ್ಲದೆ ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯನವರನ್ನು ಬಾದಾಮಿಯಲ್ಲಿ ಅಲ್ಪ ಮತಗಳಿಂದ ಸೋಲುನುಭವಿಸಿದ್ದು, ಸಿದ್ರಾಮಯ್ಯನವರ ಎದುರು ಶ್ರೀರಾಮುಲು ಬಿಟ್ಟರೆ ಮತ್ಯಾವ ನಾಯಕರು ನಿಲ್ಲುವ ಶಕ್ತಿ ಸಾಮಥ್ರ್ಯ ಹೊಂದಿರಲಿಲ್ಲ. ಆಗ ಶ್ರೀರಾಮುಲು ಅವರನ್ನು ಬಳಸಿಕೊಂಡ ಬಿಜೆಪಿ ಸ್ಥಾನ ಮಾನ ನೀಡುವಾಗ ಶ್ರೀರಾಮುಲು ಅವರನ್ನು ಮರೆತಿದ್ದಾರೆ.
ಕೂಡಲೇ ನಾಯಕ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಚ್ಚರಿಸಿದರು. ಇದೇ ವೇಳೆ ಟಯರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನಿಂಗು ದೊರೆ ಜೇವರ್ಗಿ, ಪ್ರಧಾನ ಕಾರ್ಯದರ್ಶಿ ಅಶೋಕ.ಬಿ.ಕವಲಿ, ಚಂದ್ರು, ಪ್ರಕಾಶ ಮಲ್ಲಾಬಾದಿ, ರಾಘವೇಂದ್ರ ಯಕ್ಷಿಂತಿ, ಮಲ್ಲಿಕಾರ್ಜುನ ಶಿರವಾಳ, ಅಶೋಕ ನಾಯಕ ಯಕ್ಷಿಂತಿ, ನಾಗರಾಜ ಪಿ.ಟಣಕೇದಾರ, ಯಂಕಪ್ಪ ಆರ್. ಕಾಶಿರಾಜ ಹೋಸಕೇರ, ಶ್ರೀನಿವಾಸ ಯಕ್ಷಿಂತಿ, ಶ್ರೀನಿವಾಸ ನಾಯಕ ವಗದುರ್ಗಾ, ವೆಂಕಟೇಶ ಮಕಾಶಿ ಬಿದರಾಣಿ, ಭೀಮನಾಯಕ ಬಿದರಾಣಿ, ಸಿದ್ದು ನಾಯಕ ರಾಜಾಪೂರ (ಬಿ) , ಲಕ್ಷ್ಮಣ ನಂದಿಹಳ್ಳಿ, ರಾಜು ಸಾವೂರ, ಮೌನೇಶ ನಾಯಕ ಹೊಸಕೇರಾ, ಹಣಮಂತ ನಾಯಕ ಬೀರನೂರ ಇನ್ನಿತರರಿದ್ದರು.