ಪ್ರಮುಖ ಸುದ್ದಿ
ಭೀಮಾನದಿ ಸೇತುವೆ ಕೆಳಗೆ ನವಜಾತ ಶಿಶು ಪತ್ತೆ.!
ಭೀಮಾನದಿ ಸೇತುವೆ ಕೆಳಗೆ ನವಜಾತ ಶಿಶು ಪತ್ತೆ.!
ಯಾದಗಿರಿಃ ನಗರದ ಭೀಮಾನದಿಯ ಸೇತುವೆ ಕೆಳಗಡೆ ನವಜಾತ ಶಿಶುವೊಂದು ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.
ಅದೇ ಜನ್ಮತಾಳಿದ ಒಂದು ದಿನದ ಗಂಡು ಮಗುವನ್ನು ಬಟ್ಟೆಯಲ್ಲಿ ಸುತ್ತಿ ಬ್ರಿಡ್ಜ್ ಕೆಳಗಡೆ ಬಿಸಾಕಿ ಹೋಗಿದ್ದಾರೆ ಎನ್ನಲಾಗಿದೆ.
ಮಗುವಿನ ಅಳುವ ಆಕ್ರಂದನ ಕೇಳಿದ ಸಾರ್ವಜನಿಕರು ಮಗುವನ್ನು ರಕ್ಷಿಸಿ ಮಕ್ಕಳ ಸಹಾಯ ವಾಣಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳ ಆಗಮಿಸಿದ ಮಕ್ಕಳ ಸಹಾಯವಾಣಿ ಸಿಬ್ಬಂದಿ ಮಗುವನ್ನ ರಕ್ಷಣೆ ಮಾಡಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಎಸ್.ಎನ್.ಸಿ.ಯು ಕೇಂದ್ರದಲ್ಲಿ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
ನವಜಾತು ಶಿಶು ಎಸೆದ ಪಾಪಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತವಾಗುತ್ತಿದೆ. ಮೊನ್ನೆ ಮೊನ್ನೆ ತಾನೆ ಸೈದಾಪುರ ಠಾಣೆ ವ್ಯಾಪ್ತಿ, ಹೆಣ್ಣು ಮಗು ಎಸೆದ ಘಟನೆ ಇನ್ನೂ ಮಾಸಿಲ್ಲ ಮತ್ತೇ ಅಂತಹದ್ದೆ ಘಟನೆ ನಡೆಸಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.




