ಪ್ರಮುಖ ಸುದ್ದಿ

ಕಾಂಗ್ರೆಸ್ಸಿಗರ ಪಾಡು ಭಿಕ್ಷುಕರಂತಾಗಿದೆ-ಆರ್.ಅಶೋಕ ವ್ಯಂಗ್ಯ

ಬೆಂಗಳೂರ: ಉಪಚುನಾವಣೆ ಮತದಾನಕ್ಕೂ ಮೊದಲೇ ಕಾಂಗ್ರೆಸ್‌, ಜೆಡಿಎಸ್‌ ಶಸ್ತ್ರ ತ್ಯಾಗ ಮಾಡಿರುವದು  ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದೇ ಸ್ಪಷ್ಟವಾಗಿ ಕಾಣುತ್ತಿದೆ. ಕಾಂಗ್ರೆಸ್‌ನವರು ಮತ್ತೆ ಮೈತ್ರಿ ಬಯಸುತ್ತಿರುವದು ನೋಡಿದರೆ ಅವರದು ಭಿಕ್ಷುಕರ ಪಾಡಿನಂತಾಗಿದೆ. ಕಾಂಗ್ರೆಸ್ಸಿಗರು ಭಿಕ್ಷುಕರಂತೆ ವರ್ತಿಸುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ವ್ಯಂಗ್ಯವಾಡಿದರು.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಡಿ.9ರಂದು ಸಿಹಿ ಸುದ್ದಿ ಕೊಡುವುದಾಗಿ ಹೇಳಿದ್ದಾರೆ. ಆದರೆ ರಾಜ್ಯಸಭಾ ಚುನಾವಣೆಗೆಯಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಲಿದ್ದು, ನಾವು ಈಗಾಗಲೇ ಸಿಹಿ ಸುದ್ದಿ ನೀಡಿದ್ದೇವೆ ಎಂದರು.

ಕಾಂಗ್ರೆಸ್‌, ಜೆಡಿಎಸ್‌ಗೆ ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿಲ್ಲ, ಮತದಾರರ ಮೇಲೆ ನಂಬಿಕೆ ಇದ್ದಿದ್ದರೆ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಬಹುದಿತ್ತು. ಆದರೆ ನಾಮಪತ್ರವನ್ನೇ ಸಲ್ಲಿಸದೆ ಯುದ್ದಕ್ಕೂ ಮೊದಲೇ ಶಸ್ತ್ರ ತ್ಯಾಗ ಮಾಡಿವೆ. ಕಾಂಗ್ರೆಸ್‌ನವರು ಮೈತ್ರಿ ಬಯಸುತ್ತಿದ್ದರೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸಹವಾಸವೇ ಬೇಡ ಎನ್ನುತ್ತಿದ್ದಾರೆ. ಇತ್ತ ಕಾಂಗ್ರೆಸ್ ನವರು ತಾವಾಗಿಯೇ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ ಮಾತನಾಡುತ್ತಿದ್ದು, ನಿಂದನೆಗೆ ಗುರಿಯಾಗಿದ್ದಾರೆ. ಹೀಗಾಗಿ ಸದ್ಯ ಅವರ ಪಾಡು ಭಿಕ್ಷುಕರ ಪಾಡಿನಂತಾಗಿದೆ ಎಂದು ಮತ್ತೊಮ್ಮೆ ಛೇಡಿಸಿದರು.

ಕೆ.ಸಿ.ರಾಮಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸಿದ ಅಶೋಕ

ಕಾಂಗ್ರೆಸ್ ನವರು ಸಧ್ಯ 101 ಸ್ಥಾನಗಳಿವೆ ಎಂದೆನ್ನುಕೊಳ್ಳತ್ತಿದ್ದು, ಪ್ರಸ್ತುತ್ ಉಪಚುನಾವಣೆಯಲ್ಲಿ 12 ಸ್ಥಾನ ಗೆದ್ದರೂ ಸರಳ ಬಹುಮತದ ಮ್ಯಾಜಿಕ್‌ ಸಂಖ್ಯೆ ಸಿಗಲಿದೆ. ಅದರ ಆಧಾರದ ಮೇಲೆ ರಾಜ್ಯಸಭಾ ಸ್ಥಾನವನ್ನೂ ಗೆಲ್ಲಲು ಅವಕಾಶವಿತ್ತು. ಆದರೆ ನಾಮಪತ್ರವನ್ನೇ ಸಲ್ಲಿಸದ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ.

ಕಾಂಗ್ರೆಸ್‌, ಜೆಡಿಎಸ್‌ ಇಲ್ಲೇ ವಿಫ‌ಲವಾಗಿದ್ದು, ಇನ್ನು ಉಪಚುನಾವಣೆ ಎಂಬ ಮುಖ್ಯ ಪರೀಕ್ಷೆಗೆ ತಯಾರಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದೇ ಸಂದರ್ಭದಲ್ಲಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಲಿರುವ ಕೆ.ಸಿ.ರಾಮಮೂರ್ತಿಯವರಿಗೆ ಅಭಿನಂದನೆ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button