ಪ್ರಮುಖ ಸುದ್ದಿ
ಅ.11 ರಂದು ರಾಜ್ಯದ ಹಲವಡೆ ಮಳೆ – ಯಲ್ಲೋ ಅಲರ್ಟ್
ಅ.11 ರಾಜ್ಯದಾದ್ಯಂತ ಮಳೆಃ ಯಾದಗಿರಿ, ಕಲಬುರ್ಗಿ, ರಾಯಚೂರ, ಬೀದರನಲ್ಲೂ ಮಳೆ
ಬೆಂಗಳೂರಃ ಕಳೆದ ಮೂರು ದಿನಗಳಿಂದ ಸೆಕೆ ಹೆಚ್ಚಾಗಿರುವದು ಎಲ್ಲರೂ ಗಮನಿಸಿರಬಹುದು.
ನಾವು ಊಹಿಸಿದಂತೆ ಮುಂದಿನ 24 ಗಂಟೆಯಲ್ಲಿ ರಾಜ್ಯದ ಹಲವಡೆ ಮಳೆಯಾಗುವ ಸಾಧ್ಯತೆ ಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ ಎನ್ನಲಾಗಿದೆ.
ಅಕ್ಟೋಬರ್ 11 ರಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಅಲ್ಲದೆ ಬೀದರ, ಕಲಬುರ್ಗಿ, ಯಾದಗಿರಿ, ರಾಯಚೂರ, ವಿಜಯಪುರ ಸೇರಿದಂತೆ ಬೆಳಗಾವಿಯಲ್ಲಿ ಅ.11 ರಂದು ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.