ಪ್ರಮುಖ ಸುದ್ದಿ
ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪಾದ ಸ್ಪೋಟ
ಹುಬ್ಬಳ್ಳಿಃ ಇಲ್ಲಿನ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಸ್ಪೋಟ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಯಾವುದೇ ಪ್ರಾಣಪಾಯ ನಡೆದಿರುವ ಕುರಿತು ಇನ್ನೂ ಪತ್ತೆಯಾಗಿಲ್ಲ. ಇದು ಇದೀಗ ನಡೆದ ಘಟನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಳನೆ ನಡೆಸುತ್ತಿದ್ದಾರೆ.
ಯಾವುದೇ ಡಬ್ಬಾದಲ್ಲಿ ಸ್ಪೋಟಕ ವಸ್ತು ಇಟ್ಟು ಬ್ಲಾಸ್ಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಅನುಮಾನಕ್ಕೆ ಕಾರಣವಾಗಿದೆ. ಪೊಲೀಸರು ಅಲರ್ಟ್ ಆಗಿದ್ದು, ಪರಿಶೀಲನೆ ನಡೆದಿದೆ. ಇದು ಯಾರು ನಡೆಸಿದ ಕೃತ್ಯ, ಅಥವಾ ಆತಂಕ ಸೃಷ್ಟಿಸಲು ಈ ರೀತಿ ಮಾಡಿದ್ದಾರೆಯೇ ಅಥವಾ ಉಗ್ರರು ರಾಜ್ಯದಲ್ಲಿ ನುಸುಳಿರುವ ಶಂಕೆ ಇರುವ ಕಾರಣ, ಸಾಕಷ್ಟು ಕಡೆ ಹೈ ಅಲರ್ಟ್ ಆಗಿದ್ದು, ಪೊಲೀಸ್ ರ ಸಮರ್ಪಕ ತನಿಖೆ ನಂತರವೇ ಇದಕ್ಕೆ ಉತ್ತರ ದೊರೆಯಲಿದೆ ಎನ್ನಬಹುದು.