ಪ್ರಮುಖ ಸುದ್ದಿ
ಕುಟುಂಬ ಸಮೇತ ದರ್ಶನಾಪುರ ಮತದಾನ
ಮಾಜಿ ಮತ್ತು ಹಾಲಿ ಶಾಸಕರಿಂದ ಮತದಾನ
ಕುಟುಂಬ ಸಮೇತ ದರ್ಶನಾಪುರ ಮತದಾನ
ಶಹಾಪುರಃ ಶಾಕಸ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಶರಣಬಸಪ್ಪಗೌಡ ದರ್ಶನಾಪುರ ಇಂದು ಅವರ ಸ್ವಗ್ರಾಮ ದರ್ಶನಾಪುರ ಗ್ರಾಮದಲ್ಲಿ ಕುಟುಂಬ ಸಮೇತರಾಗಮಿಸಿ ಮತದಾನ ಮಾಡಿದರು.
ಪತ್ನಿ ಭಾರತಿ ದರ್ಶನಾಪುರ, ಮಗ ಬಾಪುಗೌಡ ದರ್ಶನಾಪುರ ಮತ್ತು ಸೊಸೆಯಾದ ಪುಷ್ಪ ಬಾಪುಗೌಡ ಹಾಗೂ ಮೊಮ್ಮಕ್ಕಳಾದ ವಿಹಾನ್ ಬಾಪುಗೌಡ, ಅಹನಾ ಬಾಪುಗೌಡ ಸಹ ಜೊತೆಗಿದ್ದರು.
ತಾಲೂಕಿನ ಶಿರವಾಳ ಗ್ರಾಮದಲ್ಲಿ ಮಾಜಿ ಶಾಸಕ ಗುರು ಪಾಟೀಲ್ ಬೆಳಗ್ಗೆ ತಮ್ಮ ಮತಗಟ್ಟೆಗೆ ತೆರಳಿ ಮತ ಚಲಾವಣೆ ಮಾಡಿದರು.