ಕಲಬುರ್ಗಿಃ ತಾಜಸುಲ್ತಾನಪುರದಲ್ಲಿ ಮೂಢಾಚರಣೆ
ಕಲಬುರ್ಗಿಃ ತಾಜಸುಲ್ತಾನಪುರದಲ್ಲಿ ಮೂಢಾಚರಣೆ
ಕಲಬುರ್ಗಿಃ ಸೂರ್ಯ ಗ್ರಹಣ ಸಂದರ್ಭ ವಿಕಲಚೇತನ ಮಕ್ಕಳನ್ನು ಕುತ್ತಿಗೆವರೆಗು ಮಣ್ಣನ್ನು ಹಾಕಿ ಗ್ರಹಣ ಬಿಡುವರೆಗೂ ಇಟ್ಟರೆ ಮಕ್ಕಳ ಅಂಗವಿಕಲತೆ ನಿವಾರಣೆ ಆಗುತ್ತದೆ ಎಂಬ ನಂಬಿಕೆಯಿಂದ ತಾಲೂಕಿನ ತಾಜಸುಲ್ತಾನಪುರ ಗ್ರಾಮದಲ್ಲಿ ಪ್ರತಿ ಸೂರ್ಯ ಗ್ರಹಣ ಸಂದರ್ಭ ಅಂಗವಿಕಲತೆ ಹೊಂದಿದ ಮಕ್ಕಳನ್ನು ಈ ರೀತಿ ಮಣ್ಣಲ್ಲಿ ಮುಖ ಮಾತ್ರ ಕಾಣಿಸುವಂತೆ ನಿಲ್ಲಿಸಲಾಗುತ್ತಿದೆ.
ಇಂದು ಸೂರ್ಯ ಗ್ರಹಣ ಸಮಯದಲ್ಲಿ ಬಹುತೇಕ ಅಂಗವಿಕಲ ಮಕ್ಕಳನ್ನು ಪಾಲಕರು ಈ ಪದ್ಧತಿ ಅನುಸರಿಸಿದ್ದಾರೆ.
ಈ ರೀತಿ ಹಳೇ ಪದ್ಧತಿ ಆಚರಣೆ ಮಾಡುವದರಿಂದ ಅದೆಷ್ಟರ ಮಟ್ಟಿಗೆ ಗುಣಮುಖವಾಗಿದೆಯೋ ಅವರಿಗೆ ಗೊತ್ತು. ಆದರೆ ಇದೊಂದು ಮೂಢ ನಂಬಿಕೆ ಇದರಿಂದ ಏನು ಆಗದು ಸುಮ್ಮನೆ ಮಕ್ಕಳಿಗೆ ತೊಂದರೆ ಕೊಡುವದು ಸರಿಯಲ್ಲ ಎಂದು ಪ್ರಗತಿಪರರು ಇದನ್ನು ವಿರೋಧ ವ್ಯಕ್ತಪಡಿಸಿದ್ದಾರೆ.
ಮೂಢ ನಂಬಿಕೆಯಿಂದ ಹೊರ ಬನ್ನಿ ಆದರೆ ಮೂಡುವ ನಂಬಿಕೆ ಇರಲಿ. ಮನುಷ್ಯರಲ್ಲಿ ಭಯ, ನಂಬಿಕೆ ಅಗತ್ಯ. ಮುಖ್ಯವಾಗಿ ಇಂತಹ ಆಚಾರಣೆಗಳಿಂದ ಆರೋಗ್ಯ ಸುಧಾರಿತಗೊಂಡ ಮಕ್ಕಳು ಇದ್ದರೆ ಪಾಲಕರು ಸತ್ಯಾಂಶ ಹೊರಹಾಕಲಿ. ಅಪ್ಪ ಹಾಕಿದ ಮರವೆಂದು ಜೋತು ಬೀಳುವದು ಸರಿಯಲ್ಲ.
ಈ ಕುರಿತು ಸಂಶೋಧನೆ ನಡೆಯಬೇಕಿದೆ. ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ.