Homeಜನಮನಪ್ರಮುಖ ಸುದ್ದಿ

‘ತಿರುಪತಿ ಲಡ್ಡಿಗೆ ದನದ ಕೊಬ್ಬು ಬೆರೆಸುವುದು ಘೋರ ಅಪರಾಧ’- ಎಂ.ಬಿ ಪಾಟೀಲ್

ವಿಜಯಪುರ: ತಿರುಪತಿ ಲಡ್ಡು ವಿಚಾರ ಜನರ ಧಾರ್ಮಿಕ ಭಾವನೆಗೆ ಸಂಬಂಧಪಟ್ಟಿರುವುದು. ಲಡ್ಡಿಗೆ ದನದ ಕೊಬ್ಬು ಬೆರೆಸುವುದು ಘೋರ ಅಪರಾಧ. ದನದ ಕೊಬ್ಬನ್ನು ಬೆರೆಸಿದ್ದರೇ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಕ್ತರ ಭಾವನೆಗಳೊಂದಿಗೆ ಆಟ ಆಡುವುದು ಸರಿಯಲ್ಲ. ಅದರಲ್ಲಿ ಪಾವಿತ್ರ‍್ಯತೆ ಇದೆ, ದನದ ಕೊಬ್ಬು ಬೆರೆಸುವುದು ಘೋರ ಅಪರಾಧ. ಆಗಾಗ ಪ್ರಸಾದದ ತಪಾಸಣೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.

ಇದೇ ವೇಳೆ ಶಾಸಕ ಮುನರತ್ನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸ್ವಾಭಾವಿಕವಾಗಿ ಯಾರೂ ಊಹಿಸದ ಆಪಾದನೆಗಳು ಅವರ ಮೇಲೆ ಬರುತ್ತಿವೆ. ಎಲ್ಲದರ ಕುರಿತು ತನಿಖೆಯಾಗಲಿ. ನಿಜವಾಗಿ ಆ ರೀತಿ ಘೋರವಾದಂತಹ ಕೃತ್ಯ ಮಾಡಿದ್ದರೇ ನಿರ್ದಾಕ್ಷಿಣ್ಯ ಕ್ರಮ ಆಗಲಿದೆ. ಫಸ್ಟ್ ಟೈಮ್ ಊಹಿಸದಂತಹ ಆಪಾದನೆ ಕೇಳಿ ನಾನು ಗಾಬರಿಯಾದೆ. ಹನಿಟ್ರ‍್ಯಾಪ್, ಸಿಡಿ ಮಾಡೋದು, ಹೆಣ್ಣುಮಕ್ಕಳ ಬಳಕೆ ಇವೆಲ್ಲ ಹೇಯ ಕೃತ್ಯಗಳು ಎಂದಿದ್ದಾರೆ.

ರಾಜ್ಯಪಾಲರ ಹಸ್ತಕ್ಷೇಪ ವಿಚಾರದ ಬಗ್ಗೆ ಮಾತನಾಡಿದ ಅವರು, ಇದು ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ನಡುವಿನ ಸಂಘರ್ಷವಲ್ಲ. ಆಡಳಿತದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ಮಾಡಬಾರದು. ಎಲ್ಲರೂ ಹೋಗಿ ರಾಜ್ಯಪಾಲರಿಗೆ ದೂರು ಕೊಡುವುದು, ಅವರು ಅದನ್ನು ಪರಿಗಣಿಸುವುದು ಆಗಬಾರದು ಎಂದರು.

Related Articles

Leave a Reply

Your email address will not be published. Required fields are marked *

Back to top button