ಈಜಲು ಕೆರೆಗೆ ಇಳಿದಿದ್ದ ಯುವಕ ಸಾವು
ಈಜಲು ಕೆರೆಗೆ ಇಳಿದಿದ್ದ ಯುವಕನ ಸಾವು, ಮೃತ ದೇಹ ಹೊರತರಲು ಶೋಧ
ಯಾದಗಿರಿಃ ಈಜಲು ಕೆರೆಗೆ ಇಳಿದ ಯುವಕ ಮಡುವಿನಲ್ಲಿ ಸಿಲುಕಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಶಹಾಪುರ ನಗರದ ನಾಗರ ಕೆರೆಯಲ್ಲಿ ನಡೆದಿದೆ.
ಬಾಬು ಸೆಂಟ್ರಿಂಗ್ (38) ಎಂಬಾತ ಯುವಕನೇ ನೀರಿನ ಮಡುವಿನಲ್ಲಿ ಸಿಲುಕಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಮೃತ ಯುವಕ ನಗರದ ಜಾಲಗಾರ ಮೊಹಲ್ಲಾ ನಿವಾಸಿ ಎನ್ನಲಾಗಿದೆ.
ಸಾಕಷ್ಟು ಜನರು ಕೆರೆಯಲ್ಲಿ ಬಟ್ಟೆ ತೊಳೆಯುತಿದ್ದು, ಅಲ್ಲದೆ ಯುವಕರು ಈಜು ಆಡುತ್ತಿದ್ದರು ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಬಾಬು ಎಂಬಾತನು ಕೆರೆಗೆ ಹಾರಿದ್ದು, ಸಾಕಷ್ಟು ಸಮಯ ಕಾದರೂ ಮೇಲೆ ಬರಲಿಲ್ಲ ಎಂದು ಪ್ರತ್ಯಕ್ಷದರ್ಶಿ ವಿನಯವಾಣಿಗೆ ತಿಳಿಸಿದ್ದಾರೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ ಮೃತದೇಹ ಹುಡಕಲು ಶೋಧಕಾರ್ಯ ಮುಂದುವರೆಸಿದ್ದಾರೆ.
ಕಳೆದ ನಾಲ್ಕು ಗಂಟೆಯಿಂದ ಶೋಧಕಾರ್ಯ ಮುಂದುವರೆದಿದ್ದು, ಮೃತದೇಹ ಮಾತ್ರ ಪತ್ತೆಯಾಗಿಲ್ಲ. ಪೊಲೀಸರು ನಾಗರಿಕರು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ಬಯಲು ಹನುಮಾನ್ ಮಂದಿರದ ಯುವಕರ ಬಳಗದ ರಾಮು ತಹಸೀಲ್ ಮತ್ತು ಗೆಳೆಯರು ಶೋಧಕಾರ್ಯ ಸಿಬ್ಬಂದಿಗೆ ಸಹಕಾರ ನೀಡುತ್ತಿದ್ದಾರೆ. ಮೃತ ಯುವಕ ನೀರಲ್ಲಿ ಈಜಾಡುತ್ತಿರುವಾಗ ಮಡುವಿನಲ್ಲಿ ಮುಳುಗಿದ್ದು, ಕೆಸರಲ್ಲಿ ಸಿಲುಕಿರುವ ಸಾಧ್ಯತೆ ಇರುವ ಕಾರಣ ಮೃತ ದೇಹ ಪತ್ತೆಗೆ ಕಠಿಣವಾಗಿದೆ ಎನ್ನಲಾಗಿದೆ. ಸ್ಥಳದಲ್ಲಿ ಜನಸ್ತೋಮವೇ ನೆರದಿದೆ.