ಪ್ರಮುಖ ಸುದ್ದಿ
ಬಸ್ ಹರಿದು ಬಾಲಕನೋರ್ವನ ಸಾವು
ಶಹಾಪುರಃ ಇಲ್ಲಿನ ಹಳೇ ಬಸ್ ನಿಲ್ದಾಣ ಹತ್ತಿರ ರಾಜ್ಯ ಹೆದ್ದಾರಿ ಮೇಲೆ ನಿಂತಿದ್ದ ಬಸ್ ಮುಂದೆ ಹಾದು ಹೊರಟಿದ್ದ ಅಜ್ಜಿ ಹಾಗೂ ಮೊಮ್ಮಗ ಮೇಲೆ ಬಸ್ ಹಾಯ್ದಿದ್ದು ಪರಿಣಾಮ ಬಾಲಕನೋರ್ವ ಸ್ಥಳದಲ್ಲಿಯೃ ಮೃತಪಟ್ಟಿದೆ.
ಅಜ್ಜಿ ಗಾಯಗೊಂಡಿದ್ದು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹ್ಮದ ಮುಜಮಿಲ್ ತಂದೆ ಮಹ್ಮದ ಮುಬಾರಕ್ (5) ಮೃತ ಬಾಲಕ. ಗಾಯಾಳು ಅಜ್ಜಿ ನೂರಹಬೇಗಂ (42) ಸ್ಥಳೀಯ ಸರ್ಕಾರಿ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.