ಪ್ರಮುಖ ಸುದ್ದಿ
ಮಾಡೋಕೆ ಬೇಕಾದಷ್ಟು ಕೆಲಸವಿದೆ ಟಿಪ್ಪು ವಿಷಯ ಯಾಕೆ.? – ಶ್ರೀನಿವಾಸ ಪ್ರಸಾದ
ಬೆಂಗಳೂರಃ ರಾಜ್ಯ ಸರ್ಕಾರಕ್ಕೆ ಮಾಡಲು ಬೇಕಾದಷ್ಟು ಕೆಲಸವಿದೆ. ಟಿಪ್ಪು ವಿಷಯ ಯಾಕೆ ಎಂದು ಪ್ರಶ್ನಿಸುವ ಮೂಲಕ ಬಿಜೆಪಿಯ ಶ್ರೀನಿವಾಸ ಪ್ರಸಾದ ತಮ್ಮದೆ ಬಿಜೆಪಿ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಟಿಪ್ಪು ಕುರಿತು ಈ ಸಂದರ್ಭದಲ್ಲಿ ಪ್ರಸ್ತಾಪ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಇತಿಹಾಸದ ಅರಿವು ಇರಲಿ. ವಿವಾದಾತ್ಮಕ ಇತಿಹಾಸ ಹೊಂದಿರುವದನ್ನು ಇಂತಹ ಸಂದರ್ಭದಲ್ಲಿ ಯಾಕೆ ಉಲ್ಲೇಖಿಸಬೇಕಿತ್ತು ಎಂದು ಅವರು ಬಿಜೆಪಿ ನಾಯಕರನ್ನೆ ಪ್ರಶ್ನಿ ಮಾಡಿದ್ದಾರೆ.